ಕರಡಿಗೋಡು ಆರೆಂಜ್ ಕೌಂಟಿ ಇವಾಲ್ವ್ ಬ್ಯಾಕ್ ರೆಸಾರ್ಟ್ ಸಂಸ್ಥೆ ವತಿಯಿಂದ ನೂತನ ತಂಗುದಾಣವನ್ನು ಗಣ್ಯರು ಉದ್ಘಾಟಿಸಿದರು. 
ಜಿಲ್ಲೆ

ಆರೆಂಜ್ ಕೌಂಟಿ ಸಂಸ್ಥೆಯಿಂದ ತಂಗುದಾಣ ನಿರ್ಮಾಣ

ನಾಗೇಶ ಎಸ್

ಸಿದ್ದಾಪುರ: ಕರಡಿಗೋಡು ಆರೆಂಜ್ ಕೌಂಟಿ ಇವಾಲ್ವ್ ಬ್ಯಾಕ್ ರೆಸಾರ್ಟ್ ಸಂಸ್ಥೆ ವತಿಯಿಂದ ನೂತನ ತಂಗುದಾಣವನ್ನು ಕೊಡುಗೆಯಾಗಿ ನಿರ್ಮಿಸಿಕೊಡಲಾಯಿತು.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಬನಕೊಲ್ಲಿ ಬಳಿ 5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ತಂಗುದಾಣವನ್ನು ಇತ್ತೀಚೆಗೆ ಮಾಲ್ದಾರೆ ಗ್ರಾಪಂ ಅಧ್ಯಕ್ಷೆ ಮಾಲತಿ ಹಾಗೂ ಸಿದ್ದಾಪುರ ಗ್ರಾಪಂ ಉಪಾಧ್ಯಕ್ಷ ಪಳನಿಸ್ವಾಮಿ ಉದ್ಘಾಟನೆ ಮಾಡಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ, ಹಲವು ವರ್ಷಗಳ ಹಿಂದೆ ಕರಡಿಗೋಡು ಗ್ರಾಮದಲ್ಲಿ ಆರೆಂಜ್ ಕೌಂಟಿ ರೆಸಾರ್ಟ್ ಸಂಸ್ಥೆಯನ್ನು ಪ್ರಾರಂಭಿಸಿ, ಸಂಸ್ಥೆ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಲವು ಯೋಜನೆಗಳನ್ನು ರೂಪಿಸಿ ಗ್ರಾಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಗ್ರಾಮ ವ್ಯಾಪ್ತಿಯಲ್ಲಿ ಸೋಲಾರ್ ದೀಪ ಅಳವಡಿಕೆ, ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ, ಶುಚಿತ್ವಕ್ಕೆ ಆದ್ಯತೆ, ಶಾಲಾ ಮಕ್ಕಳ ಶಿಕ್ಷಣಕ್ಕೆ ನೆರವು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಆರೆಂಜ್ ಕೌಂಟಿ ಸಂಸ್ಥೆಯ ವ್ಯವಸ್ಥಾಪಕ ಥೋಮಸ್ ಪೌಲ್, ತೋಟದ ವ್ಯವಸ್ಥಾಪಕ ಪವನ್, ಪ್ರವೀಣ್, ಗ್ರಾಪಂ ಸದಸ್ಯರಾದ ಮೊಹಮ್ಮದ್ ಅಲಿ, ಹನೀಫ್, ಹಸ್ಸನ್, ಶಮೀರ್, ಮಹೇಶ್ ಕುಮಾರ್, ಮುತ್ತಪ್ಪ, ಪ್ರಮುಖರಾದ ಮಹೇಶ್, ಗಿರೀಶ್ ಹಾಜರಿದ್ದರು.