ಜಿಲ್ಲೆ

ಗೌರಸಮುದ್ರಕ್ಕೆ ಬಸ್ ನಿಲ್ದಾಣ ಸೌಕರ್ಯ ಕಲ್ಪಿಸಿಕೊಡಿ

ಕೊಂಡ್ಲಹಳ್ಳಿ (ಚಿತ್ರದುರ್ಗ ಜಿಲ್ಲೆ): ಮಾರಮ್ಮದೇವಿಯ ಪುಣ್ಯಕ್ಷೇತ್ರವಾದ ಗೌರಸಮುದ್ರ ಗ್ರಾಮ ಬಸ್ ನಿಲ್ದಾಣದಿಂದ ವಂಚಿತವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಆಂಧ್ರ ಸೇರಿ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿ ನಿರಂತರ ಜನ, ವಾಹನ ಸಂಚಾರವಿರುತ್ತದೆ. ಪ್ರಯಾಣಿಕರು ಬಸ್‌ಗಾಗಿ ಬಿಸಿಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ.

ಗ್ರಾಮದ ಮಧ್ಯಭಾಗದಲ್ಲಿರುವ ಗ್ರಾಪಂ ಹಳೆಯ ಕಟ್ಟಡ ತೆರವುಗೊಳಿಸಿದರೆ ಸುಸಜ್ಜಿತ ನಿಲ್ದಾಣ ನಿರ್ಮಿಸಬಹುದು. ಈ ಬಗ್ಗೆ ಸಂಬಂಧಿತ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಇನ್ನಾದರೂ ಗಡಿಗ್ರಾಮದತ್ತ ಗಮನ ಹರಿಸಿ ಸೌಲಭ್ಯ ಕಲ್ಪಿಸುವಂತೆ ಗ್ರಾಪಂ ಸದಸ್ಯರಾದ ಶಶಿಕುಮಾರ್, ಎಂ.ಓಬಣ್ಣ, ಸುಭಾಷಿಣಿ, ಶಶಿರೇಖಾ, ಈರಣ್ಣ, ನಾಗವೇಣಿ, ಭಾಗ್ಯಮ್ಮ, ಮಾಜಿ ಸದಸ್ಯ ಜಿ.ಬಿ.ನಾರಾಯಣರೆಡ್ಡಿ, ಮುಖಂಡರಾದ ಮೂರ್ತಿ, ಬೊಮ್ಮಣ್ಣ, ನಾಗರಾಜ್, ಸುರೇಶ್ ಒತ್ತಾಯಿಸಿದ್ದಾರೆ.