ಪುತ್ತೂರು ಗ್ರಾಮಾಂತರ: ಆರ್ಯಾಪು ಗ್ರಾಮದ ಹಂಟ್ಯಾರು (ಸಂಟ್ಯಾರು) ಶಾಲಾ ಬಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಸ್‌ಡಿಪಿಐ ಸಂಟ್ಯಾರು ಘಟಕ ವತಿಯಿಂದ ನಿರ್ಮಿಸಲಾದ ಪ್ರಯಾಣಿಕರ ಬಸ್ ತಂಗುದಾಣವನ್ನು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಉದ್ಘಾಟಿಸಿದರು.
ಎಸ್‌ಡಿಪಿಐ ಸಂಟ್ಯಾರು ಘಟಕ ಅಧ್ಯಕ್ಷ ಝಖರಿಯಾ ಸಂಟ್ಯಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಹಂಟ್ಯಾರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಾಬು ಮರಿಕೆ, ಸಂಟ್ಯಾರು ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಉದ್ಯಮಿ ಸಿ.ಎಂ.ಇಬ್ರಾಹಿಂ ಮುಸ್ಲಿಯಾರ್, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಉಸ್ಮಾನ್ ಎ.ಕೆ., ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ವಾಗ್ಲೆ, ಕಾರ್ಯದರ್ಶಿ ಮಸೂದ್ ಸಂಟ್ಯಾರ್, ಆರ್ಯಾಪು ಗ್ರಾ.ಪಂ. ಸದಸ್ಯರಾದ ನಾಗೇಶ್ ಕುರಿಯ, ರಶೀದಾ ಕಲ್ಲರ್ಪೆ, ಒಳಮೊಗ್ರು ಗ್ರಾಪಂ ಸದಸ್ಯ ಸಿರಾಜ್ ಪರ್ಪುಂಜ, ಸಂಟ್ಯಾರಿನ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಘಟನೆಯ ಉಪಾಧ್ಯಕ್ಷ ಬಶೀರ್ ಮರಿಕೆ, ಉದ್ಯಮಿ ಮಹಮ್ಮದ್ ಕಲ್ಲರ್ಪೆ, ಸುನೀಲ್ ಡಿಸೋಜ ಮತ್ತಿತರರಿದ್ದರು. ಎಸ್‌ಡಿಪಿಐ ಸಂಟ್ಯಾರು ಘಟಕ ಕಾರ್ಯದರ್ಶಿ ಶಾಫಿ ಮರಿಕೆ ಸ್ವಾಗತಿಸಿದರು. ಎಸ್‌ಡಿಪಿಐ ಕುಂಬ್ರ ಬ್ಲಾಕ್ ಅಧ್ಯಕ್ಷ ರಿರಝಾಝ್ ಬಳಕ್ಕ ಪ್ರಸ್ತಾವಿಸಿದರು. ಸಮದ್ ಝೆನಿತ್ ಕಾರ್ಯಕ್ರಮ ನಿರೂಪಿಸಿದರು.