ನಾಲ್ಕು ವರ್ಷಗಳ ನಂತರ ಹೆಗ್ಗಾರಿಗೆ ಬಂದ ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಬರಮಾಡಿಕೊಂಡರು. 
ಜಿಲ್ಲೆ

ನಾಲ್ಕು ವರ್ಷಗಳ ಬಳಿಕ ಹೆಗ್ಗಾರಗೆ ಬಸ್ ಸಂಚಾರ

ವಿನಯ ಹೆಗಡೆ

ಯಲ್ಲಾಪುರ: ಪಟ್ಟಣದ ಬಸ್ ಘಟಕದಿಂದ ಹೆಗ್ಗಾರ ಭಾಗಕ್ಕೆ ಬಸ್ ಓಡಾಟ ನಾಲ್ಕು ವರ್ಷಗಳ ನಂತರ ಪುನರಾರಂಭಗೊಂಡಿದೆ.

ಗುಳ್ಳಾಪುರದ ಸೇತುವೆ ಕುಸಿದ ನಂತರ ಈ ಭಾಗಕ್ಕೆ ಬಸ್ ಸಂಚಾರ ಸ್ಥಗಿತವಾಗಿತ್ತು. ರಾಮನಗುಳಿ ಸೇತುವೆ ಆದ ನಂತರ ಜನಾಗ್ರಹಕ್ಕೆ ಮಣಿದು ಕಮ್ಮಾಣಿಗೆ ಬಸ್ ಓಡಾಟ ಆರಂಭಿಸಲಾಗಿತ್ತು. ಹೆಗ್ಗಾರ ಭಾಗ ಮಾತ್ರ ಇದರಿಂದ ವಂಚಿತವಾಗಿತ್ತು.

ಈಗ ಕಮ್ಮಾಣಿವರೆಗೆ ಹೋಗುತ್ತಿದ್ದ ಬಸ್ ಅನ್ನೇ ಸ್ಥಳೀಯರ ಆಗ್ರಹದ ಮೇರೆಗೆ ಹೆಗ್ಗಾರವರೆಗೂ ಪ್ರತಿನಿತ್ಯ ಓಡಾಡುವಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇದರಿಂದ ಹೆಗ್ಗಾರ ಹಾಗೂ ಸುತ್ತಮುತ್ತಲಿನ ಭಾಗದ ವಿದ್ಯಾರ್ಥಿಗಳು, ಕೃಷಿ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ.

ನಾಲ್ಕು ವರ್ಷಗಳ ನಂತರ ಊರಿಗೆ ಬಂದ ಬಸ್‌ಗೆ ಪೂಜೆ ಸಲ್ಲಿಸಿ, ಬರಮಾಡಿಕೊಳ್ಳಲಾಯಿತು. ಪ್ರಮುಖರಾದ ವಿ.ವಿ. ಜೋಶಿ, ಎನ್.ಎನ್. ಹೆಬ್ಬಾರ, ಮಹಾಬಲೇಶ್ವರ ಭಟ್ಟ, ರಾಮಕೃಷ್ಣ ಗಾಂವ್ಕರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.