ಜಿಲ್ಲೆ

ಬಸ್‌ ಸಮಸ್ಯೆ ಬಗೆಹರಿಸಲು ಬಿಜೆಪಿ ಮನವಿ

Uttara Kannada - Subash Hegde

ಕಾರವಾರ: ಗ್ರಾಮೀಣ ಭಾಗದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕಾರವಾರ ಬಿಜೆಪಿ ಗ್ರಾಮೀಣ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಮನವಿ ಸಲ್ಲಿಸಿದರು.
ಶಾಲೆ ಪ್ರಾರಂಭವಾಗಿ 1 ತಿಂಗಳು ಕಳೆದಿದೆ. ಆದರೆ, ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳು ಸರಿಯಾದ ಸಮಯಕ್ಕೆ ಬಾರದೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಬಹಳ ಸಮಸ್ಯೆ ಆಗುತ್ತಿದ್ದೆ. ಕೆಲವು ಬಪ್ಪಗಳು ಮಾರ್ಗಮಧ್ಯದಲ್ಲಿಯೆ ಕೆಟ್ಟು ನಿಂತು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪದೆ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಅವುಗಳನ್ನು ಸರಿಪಡಿಸಬೇಕು.
ಗ್ರಾಮಿಣ ಭಾಗದಲ್ಲಿ ನೀರಂತರವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ದಿನದ ನಾಲ್ಕು ಗಂಟೆಯೂ ಸರಿಯಾಗಿ ವಿದ್ಯುತ್ ಇರುವದಿಲ್ಲ. ಹೆಸ್ಕಾಂ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಗ್ರಾಮೀಣ ಜನರಿಗೆ ತೊಂದರೆಯಾಗಿದೆ. ಕಾರವಾರ ಶಹರದಿಂದ ಕೈಗಾವರೆಗೆ ಲೋಕೋಪಯೋಗಿ ಇಲಾಖೆ ಚರಂಡಿಯನ್ನು ಹೂಳೆತ್ತಿಲ್ಲ. ಇದರಿಂದ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸಮಸ್ಯೆಯಾಗುತ್ತಿದೆ ಎಂದು ಸಮಸ್ಯೆಗಳನ್ನು ವಿವರಿಸಿದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ನೇತೃತ್ವದಲ್ಲಿ ಸೂರಜ್ ದೇಸಾಯಿ, ನಾಗೇಶ ಕುರ್ಡೇಕರ್, ಅಶೋಕ ನಾಯ್ಕ ಇತರರು ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಇದ್ದರು.