ಕಲಬುರಗಿ: ಮದುವೆ ದಿಬ್ಬಣದ ಮೂವತ್ತಕ್ಕೂ ಅಧಿಕ ಜನರಿದ್ದ ಬಸ್ಸೊಂದು ಪಲ್ಟಿಯಾಗಿ ಕಂದಕಕ್ಕೆ ಉರುಳಿದ ದುರಂತ ಸಂಭವಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಇಂಥದ್ದೊಂದು ಭೀಕರ ಅಪಘಾತ ಸಂಭವಿಸಿದೆ.
ಕಲಬುರಗಿಯ ಕಡಣಿ ಗ್ರಾಮದ ಬಳಿ ಈ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದಾಚೆಗೆ ಸರಿದ ಬಸ್ ಪಲ್ಟಿಯಾಗಿ ಕಂದಕಕ್ಕೆ ಉರುಳಿದೆ. ಬಸ್ನಲ್ಲಿ ಮಹಿಳೆಯರು ಮಕ್ಕಳು ಸೇರಿ 30ಕ್ಕೂ ಅಧಿಕ ಮಂದಿ ಹಾಜರಿದ್ದರು.
ಕೂಡಲೇ ಗ್ರಾಮಸ್ಥರು ಸಹಾಯಕ್ಕೆ ಧುಮುಕಿದ್ದು, ಜೆಸಿಬಿ ಯಂತ್ರದ ಮೂಲಕ ಪಲ್ಟಿಯಾಗಿರುವ ಬಸ್ ಮೇಲೆತ್ತಲು ಪ್ರಯತ್ನಿಸಲಾಗಿದೆ. ಅದಾಗ್ಯೂ ಇನ್ನೂ ಮೂವರು ಬಸ್ನಡಿಗೆ ಸಿಲುಕಿರುವ ಶಂಕೆ ಇದೆ. ಕಲಬುರಗಿಯಲ್ಲಿ ಮದುವೆ ಮುಗಿಸಿಕೊಂಡವರು ಈ ಬಸ್ನಲ್ಲಿ ಹಾವನೂರು ಕಡೆಗೆ ಹೋಗುತ್ತಿದ್ದರು.