ಸಕಲೇಶಪುರ: ಸಕಲೇಶಪುರದಿಂದ ಅನ್ಯ ತಾಲೂಕು ಮತ್ತು ಅಂತರ ಜಿಲ್ಲೆಗಳಿಗೆ ಶುಕ್ರವಾರದಿಂದ ಬಸ್‌ಗಳ ಸಂಚಾರ ಆರಂಭಗೊಳ್ಳಲಿವೆ ಎಂದು ಸ್ಥಳೀಯ ಸಾರಿಗೆ ವ್ಯವಸ್ಥಾಪಕ ಎಡ್ವಿನ್ ಜಯಚಂದ್ರ ಹೇಳಿದ್ದಾರೆ.
ಸರ್ಕಾರ ಮೇ 4ರಿಂದಲೇ ಬಸ್ ಸಂಚಾರ ಆರಂಭಿಸುವಂತೆ ಸೂಚಿಸಿತ್ತು. ಆದರೆ, ಪ್ರಯಾಣಿಕರ ಕೊರತೆ ಕಾರಣದಿಂದ ಅರ್ಧ ಗಂಟೆಗೊಂದರಂತೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಬಸ್ ಸಂಚಾರ ಪ್ರಾರಂಭಿಸಲಾಗಿತ್ತು.
ಇತ್ತೀಚೆಗೆ ಪ್ರಯಾಣಿಕರ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮೂಡಿಗೆರೆ ಹಾಗೂ ಬೇಲೂರು ಹಾಗೂ ಮೈಸೂರಿಗೆ ಸಕಲೇಶಪುರದಿಂದ ಮುಂಜಾನೆ 6ರಿಂದ 7ರವರೆಗೆ ಬಸ್‌ಗಳು ಸಂಚರಿಸಲಿವೆ. ಸರ್ಕಾರದ ಸೂಚನೆ ಬಂದ ನಂತರ ಗ್ರಾಮಾಂತರ ಪ್ರದೇಶಗಳಿಗೂ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.