ಜಿಲ್ಲೆ

ಗುಂಡಿಗೆ ಇಳಿದ ರಸ್ತೆ ಸಾರಿಗೆ ಸಂಸ್ಥೆ ಬಸ್

ತಪ್ಪಿದ ಅನಾಹುತ

 ಅರೇಹಳ್ಳಿ-ತೊಳಲು ರಸ್ತೆಯ ಕಣಗುಪ್ಪೆ ಗ್ರಾಮದಲ್ಲಿ ಘಟನೆ

ವಿಜಯವಾಣಿ ಸುದ್ದಿಜಾಲ ಬೇಲೂರು

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೇ ಹೆಚ್ಚಾಗಿ ಇದ್ದ ಸಾರಿಗೆ ಬಸ್ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗಿಳಿದಿರುವ ಘಟನೆ ತಾಲೂಕಿನ ಅರೇಹಳ್ಳಿ-ತೊಳಲು ರಸ್ತೆಯ ಕಣಗುಪ್ಪೆ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ.

ತಾಲೂಕಿನ ಅರೇಹಳ್ಳಿ ಹೋಬಳಿ ಕೇಂದ್ರದಿಂದ-ಅನುಘಟ್ಟ-ತೊಳಲು ಮಾರ್ಗವಾಗಿ ಬೇಲೂರು ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಸೋಮವಾರ ಬೆಳಗ್ಗೆ ಸಕಲೇಶಪುರದಿಂದ ಕೆಎಸ್‌ಆರ್‌ಟಿಸಿ ಬಸ್ ಈ ಭಾಗದ ಶಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸೋಮವಾರದ ಸಂತೆಗೆ ಹೊರಟಿದ್ದ ಪ್ರಯಾಣಿಕರನ್ನು ಕರೆದುಕೊಂಡು ಕಣಗುಪ್ಪೆ ಗ್ರಾಮದ ಸಮೀಪ ರಸ್ತೆ ತಿರುವಿನಲ್ಲಿ ಬರುತಿದ್ದ ಸಂದರ್ಭ ಎದುರಿನಿಂದ ಬರುತಿದ್ದ ಇನ್ನೊಂದು ವಾಹನಕ್ಕೆ ಜಾಗ ಬಿಡುವ ಸಂದರ್ಭ ರಸ್ತೆಗೆ ಹೊಂದಿ ಕೊಂಂಡಂತೆ ಜಲ ಜೀವನ್ ಮಿಷನ್ ಕಾಮಗಾರಿ ಗುಂಡಿಗೆ

ಇಳಿಯಿತು. ತಕ್ಷಣವೇ ಬಸ್ ಎಡ ಭಾಗಕ್ಕೆ ಬಾಗಿದ್ದರಿಂದ ಗಾಬರಿಯಾದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಜೋರಾಗಿ ಕೂಗಿ ಕೊಂಡರು. ಬಸ್ಸಿಗೆ ಕೇವಲ ಎರಡು ಅಡಿಯಷ್ಟು ಅಂತರದಲ್ಲೆ ವಿದ್ಯುತ್ ಕಂಬವಿತ್ತು.

ಬಸ್ ಗುಂಡಿಯಲ್ಲಿ ಹೂತು ಕೊಂಡಿದ್ದರಿಂದ ಮುಂದೆ ಚಲಿಸಲಾಗಿಲ್ಲ. ವಿದ್ಯುತ್ ಕಂಬಕ್ಕೇನಾದರೂ ಬಸ್ ಡಿಕ್ಕಿ ಹೊಡೆದಿದ್ದರೆ ಅನಾಹುತವೇ ನಡೆದು ಹೋಗುತಿತ್ತು. ಆದರೆ ಬಸ್ ಏಕಾಏಕಿ ಗುಂಡಿಗಿಳಿದಿದ್ದರಿಂದ ಬಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

*

ಬಾಕ್ಸ್‌ನ್ಯೂಸ್: ))

ಬೇಕಾಬಿಟ್ಟಿ ಕಾಮಗಾರಿ

ಕೇಂದ್ರ ಸರ್ಕಾರದ ಜೆ.ಜೆ.ಎಂ(ಜಲ ಜೀವನ್ ಮಿಷನ್)ಯೋಜನೆಯಡಿ ಮನೆ ಮನೆಗೆಗಳಿಗೆ ನೀರು ಕೊಡುವುದಕ್ಕಾಗಿ ಪೈಪ್‌ಲೈನ್ ಅಳವಡಿಸಲು ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಸರಬರಾಜು ವಿಭಾಗದಿಂದ ಗುತ್ತಿಗೆದಾರರು ಕಾಮಗಾರಿಗಾಗಿ ರಸ್ತೆಗೆ ಹೊಂದಿ ಕೊಂಡಂತೆ ಗುಂಡಿ ತೆಗೆದಿದ್ದರು.

ಮನಸ್ಸಿಗೆ ಬಂದಂತೆ ಅದನ್ನು ಮುಚ್ಚಿರುವುದರಿಂದ ರಸ್ತೆ ಪಕ್ಕದಲ್ಲಿ ಚಲಿಸುವ ವಾಹನಗಳು ಗುಂಡಿಗಿಳಿಯುತ್ತಿರುವ ಘಟನೆಗಳು ಸಾಕಷ್ಟು ನಡೆದಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ರಸ್ತೆ ಪಕ್ಕದಲ್ಲಿ ತೆಗೆದಿರುವ ಗುಂಡಿಗಳನ್ನು ಸರಿಯಾಗಿ ಮುಚ್ಚುವಂತೆ ಕಣಗುಪ್ಪೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

* ಕೋಟ್) ))

ಜೆಜೆಎಂ ಕಾಮಗಾರಿಗೆಂದು ರಸ್ತೆ ಬದಿಯಲ್ಲಿ ಅಗೆದಿರುವ ಕಳಪೆ ಕಾಮಗಾರಿಯಿಂದಾಗಿ ನಮ್ಮೂರಿನ ಬಳಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಪಕ್ಕದ ಗುಂಡಿಗಿಳಿಯಲು ಪ್ರಮುಖ ಕಾರಣವಾಗಿದೆ. ಇನ್ನಾದರೂ ಸ್ಥಳೀಯ ಜನ ಪ್ರತಿನಿಧಿಗಳು, ಶಾಸಕರು, ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಗುಣಮಟ್ಟದ ಕೆಲಸ ಮಾಡಿಸಲು ಮುಂದಾಗಬೇಕಿದೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಅಪಘಾತ ಆಗಬಹುದು.

ಕುಮಾರ್ ಕಣಗುಪ್ಪೆ

ನಿರ್ದೇಶಕ, ಅನುಘಟ್ಟ ಕೃಷಿ ಪತ್ತಿನ ಸಹಕಾರ ಸಂಘ.

*

ಚಿತ್ರ:21(ಬಿಎಲ್‌ಆರ್)1-

ಬೇಲೂರು ತಾಲೂಕಿನ ಅನುಘಟ್ಟ-ತೊಳಲು ಮಾರ್ಗವಾಗಿ ಕಣಗುಪ್ಪೆ ಗ್ರಾಮದ ಸಮೀಪ ರಸ್ತೆ ಪಕ್ಕದ ಗುಂಡಿಗಿಳಿದು ಪಕ್ಕಕ್ಕೆ ವಾಲಿರುವ ಕೆಎಸ್‌ಆರ್‌ಟಿಸಿ ಬಸ್.