ಜಿಲ್ಲೆ

ಸಾರಿಗೆ ಬಸ್ ಗೆ ಕಲ್ಲು ಎಸೆತ; ಇಬ್ಬರನ್ನು ಬಂಧಿಸಿದ ಪೊಲೀಸರು

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಬಳಿ‌ಸಾರಿಗೆ ಬಸ್ ಮೇಲೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬೆನಕನಹೊಳಿ ಗ್ರಾಮದ ಪರುಶರಾಮ ನಾಯಕ (೨೪),‌ಬಸವರಾಜ ಶಿಂದೆ (26) ಬಂಧಿತರು. ಇಬ್ಬರು ಗೋವಾದಲ್ಲಿ ಕೆಲಸ ಮಾಡುತ್ತಾರೆ.
ಗುರುವಾರ ರಾತ್ರಿ ಹುಕ್ಕೇರಿ ಯಿಂದ ಬೆಳಗಾವಿ ಗೆ ಹೋಗುವ ದಾರಿ ಮದ್ಯದಲ್ಲಿ ಬೆನಕನಹೊಳಿ ಗ್ರಾಮದ ಹತ್ತಿರ ಬಸ್ಸಿನ ಎಡಬಾಜು ಕಿಡಕಿಯ ಗ್ಲಾಸಿಗೆ ಕಲ್ಲು ಎಸೆದಿದ್ದಾರೆ. ಈ ವೇಳೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹುಕ್ಕೇರಿ ಅಗ್ನಿಶಾಮಕ ಠಾಣೆಯ ಚಾಲಕ ರಮೇಶ ಗಾಯಗೊಂಡಿದ್ದನು. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌ ಎಂದು ಎಸ್ಪಿ ತಿಳಿಸಿದ್ದಾರೆ.