ಜಿಲ್ಲೆ

ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ ಆಪತ್ತು!

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ರಾಜ್ಯ ಸರ್ಕಾರವು ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮಹಿಳೆಯರಿಗೆ ಆಪತ್ತು ತರುತ್ತಿದೆ!
ನಗರ, ಗ್ರಾಮೀಣ ಭಾಗಗಳಲ್ಲಿ ಬಸ್ ಗಳ ಸಂಚಾರ ಕಡಿಮೆಯಾಗಿರುವುದರಿಂದ ಬಹುತೇಕ ಬಸ್‌ಗಳು ತುಂಬಿ ಬರುತ್ತಿವೆ. ಹಾಗಾಗಿ ಪ್ರಯಾಣಿಕರು ಬಾಗಿಲಲ್ಲೇ ನಿಂತು, ಜೋತು ಬಿದ್ದು ಪ್ರಯಾಣ ಮಾಡುವ ಅನಿವಾರ್ಯ ಎದುರಾಗಿದೆ. ಗೋಕಾಕ, ಸವದತ್ತಿ, ಮೂಎಲಗಿ, ಬೈಲಹೊಂಗಲ,ಚಿಕ್ಕೋಡಿ, ರಾಮದುರ್ಗ, ರಾಯಬಾಗ, ಹುಕ್ಕೇರಿ ತಾಲೂಕಿನಲ್ಲಿ   ಬಸ್‌ ಕೊರತೆ ಸಹ ಬಹುವಾಗಿ ಕಾಡುತ್ತಿದೆ. ಜನರು ಪ್ರಾಣ ಪಣಕ್ಕಿಟ್ಟು ಬಸ್‌ ಏರುವಂತಾಗಿದೆ. ಸಾರಿಗೆ ಅಧಿಕಾರಿಗಳ‌ಮೌನ ವಹಿಸಿದ್ದು ಜನರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.