ಲಿಂಗಸುಗೂರು: ಲೆಕ್ಕಿಹಾಳ ಗ್ರಾಮಕ್ಕೆ ಶಾಲೆ-ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಸಾರಿಗೆ ಡಿಪೋ ವ್ಯವಸ್ಥಾಪಕ ರಾಹುಲ್ ಹೊನಸೂರೆಗೆ ಗ್ರಾಮದ ವಿದ್ಯಾರ್ಥಿಗಳು ಎಸ್‌ಎಫ್‌ಐ ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.
ಗ್ರಾಮಕ್ಕೆ ಬಸ್‌ಗಳು ತಡವಾಗಿ ಬರುತ್ತಿವೆ. ಇದರಿಂದಾಗಿ ಗ್ರಾಮದಿಂದ 6 ಕಿ.ಮೀ ನಡೆದುಕೊಂಡು ಲಿಂಗಸುಗೂರ-ಇಳಕಲ್ ಸಂಪರ್ಕ ರಸ್ತೆಗೆ ತೆರಳಿ ಬಸ್‌ನಲ್ಲಿ ಲಿಂಗಸುಗೂರು, ಮುದಗಲ್‌ಗೆ ತೆರಳಬೇಕಾಗಿದೆ. ಈ ಕಾರಣದಿಂದ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಡಿಪೋ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದರೂ ಸ್ಪಂದನೆ ಸಿಕ್ಕಿಲ್ಲ. ಬೆಳಗ್ಗೆ 9 ಹಾಗೂ ಸಂಜೆ 4.30 ಕ್ಕೆ ಲೆಕ್ಕಿಹಾಳಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.