ಜಿಲ್ಲೆ

ಇಂದಿನಿಂದ ಖಾನಾಪೂರ ತಾಲೂಕಿನ ಹಲವು ಗ್ರಾಮಗಳಿಗೆ ಸಾರಿಗೆ ಸೌಲಭ್ಯ

Belagavi - Ravi Arjun Gosavi

ಬೆಳಗಾವಿ : ಬೆಳಗಾವಿ ವಿಭಾಗದ ಖಾನಾಪೂರ ತಾಲೂಕಿನಲ್ಲಿ ಸಾರಿಗೆ ಸೌಲಭ್ಯ ಹೊಂದಿರದ ಕೆಲವು ಗ್ರಾಮಗಳಿಗೆ ಜು.19 ರಿಂದ ಜಾರಿಗೆ ಬರುವಂತೆ  ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಖಾನಾಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಗ್ರಾಮಗಳು ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಇರುವುದರಿಂದ, ಸದರಿ ಗ್ರಾಮಗಳ ಮಾರ್ಗ ಸರ್ವೇಕ್ಷಣೆ ಕೈಗೊಂಡಿದ್ದು, ಆ ಗ್ರಾಮಗಳ ಪೈಕಿ ಅಸೋಗಾ, ಮಂತುರ್ಗಾ ಹಾಗೂ ತಿವೋಲಿ ಗ್ರಾಮಗಳಿಗೆ ಬೆಳಿಗ್ಗೆ 7.10, ಸಂಜೆ 7.15 ರವರೆಗೆ ಎರಡು ಸುತ್ತುಗಳ ಸಾರಿಗೆ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿಕೊಳಲಾಗಿದೆ.
ಖಾನಾಪೂರ-ಅಸೋಗಾ-ಮಂತುರ್ಗಾ ಮಾರ್ಗವಾಗಿ ಬೆಳಿಗ್ಗೆ 7.10 ರಿಂದ ಸಂಜೆ 5.15 ಗಂಟೆವರಿಗೆ ಖಾನಾಪೂರ ದಿಂದ ತಿವೋಲಿ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4.45 ಬಸ್ ಸೌಲಭ್ಯ ಒದಗಿಸಲಾಗಿದೆ. ಆಯಾ ಗ್ರಾಮಗಳ ಪ್ರಯಾಣಿಕರು ಹಾಗೂ ಶಾಲಾ ಕಾಲೇಜು ವಿಧ್ಯಾರ್ಥಿಗಳು ಈ  ಸಾರಿಗೆ  ಸೌಲಭ್ಯ ಸದುಪಯೋಗಡಿಸಿಕೊಳ್ಳಬೇಕು ಎಂದು  ಪ್ರಕಟಣೆ  ತಿಳಿಸಿದೆ.