ಮದ್ದೂರು: ತಾಲೂಕಿನ ತರಮನಕಟ್ಟೆಯಲ್ಲಿ ಸೋಮವಾರ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. ಚಾಲಕ ವೈ.ಪಿ.ಸ್ವಾಮಿ, ನಿರ್ವಾಹಕ ಮಹೇಶ್ ಹಲ್ಲೆಗೊಳಗಾದವರು. ಕೆಎಸ್‌ಆರ್‌ಟಿಸಿ ಮಾಗಡಿ ಡಿಪೋದಿಂದ ಭಾನುವಾರ ಬೆಳಗ್ಗೆ 9.45 ಗಂಟೆಗೆ ಹೊರಟು ಮಂಡ್ಯ ತಾಲೂಕು ಬಸರಾಳು ಹೋಬಳಿ ಮತ್ತೆಗೆರೆಯಿಂದ ಶ್ರೀನಗರ ಮಾರ್ಗದಲ್ಲಿ ಸಂಚರಿಸುವ ಬಸ್‌ಅನ್ನು ತರಮನಕಟ್ಟೆ ಬಳಿ ನಿಲ್ಲಿಸಲಾಗತ್ತು. ಬಸ್‌ನಲ್ಲಿ ಹೆಚ್ಚಿನ ಪ್ರಯಾಣಿಕರಿದ್ದರಿಂದ ತರಮನಕಟ್ಟೆ ಕಾಲನಿಯಲ್ಲಿದ್ದ ಪ್ರಯಾಣಿಕರನ್ನು ಬಸ್ ಹತ್ತಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿ ಬಸ್ ಹತ್ತಿದ ಯುವಕರು ಕಂಡಕ್ಟರ್ ಶರ್ಟ್ ಹಿಡಿದುಕೊಂಡು ಬಸ್‌ನಿಂದ ಕೆಳಗೆ ಎಳೆದುಕೊಂಡು ಹಲ್ಲೆ ಮಾಡಿದರು. ಆಗ ಚಾಲಕ ಬಂದಾದ ಚಾಲಕನಿಗೂ ಹಲ್ಲೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿದರು. ಗಲಾಟೆ ಬಿಡಿಸಲು ಹೋದ ಕೆಲ ಪ್ರಯಾಣಿಕರಿಗೂ ಹಲ್ಲೆ ಮಾಡಿದ್ದಾರೆ ನಂತರ ಸ್ಥಳದಲ್ಲಿದ್ದವರು ಗಲಾಟೆ ಬಿಡಿಸಿದರು ಎಂದು ಚಾಲಕ ಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.