ಕೊಳ್ಳೇಗಾಲ: ಟಯರ್ ಬಿಚ್ಚುವ ವಿಷಯಕ್ಕೆ ಎಸ್‌ಎಂಎಂಎಸ್ ಬಸ್ ಚಾಲಕನ ಮೇಲೆ ನಿರ್ವಾಹಕ ಹಲ್ಲೆ ನಡೆಸಿದ್ದಾನೆ.
ಹನೂರು ತಾಲೂಕಿನ ಕೂಡ್ಲೂರು ಗ್ರಾಮದ ಕೆ.ಜಿ.ರಾಜು ಹಲ್ಲೆಗೊಳಗಾದ ಚಾಲಕ. ಗುಂಡ್ಲುಪೇಟೆ ಮೂಲದ ರಮೇಶ್ ಹಲ್ಲೆ ನಡೆಸಿರುವ ಬಸ್ ನಿರ್ವಾಹಕ.
ಎಸ್‌ಎಂಎಂಎಸ್ ಬಸ್ ಅನ್ನು ಮಂಗಳವಾರ ಕೊಳ್ಳೇಗಾಲ ಪಟ್ಟಣದ ಚಿನ್ನಣ್ಣ ಗ್ಯಾರೇಜ್‌ನಲ್ಲಿ ರಿಪೇರಿಗೆ ಬಿಡಲಾಗಿತ್ತು. ಬಸ್ ಟಯರ್ ಬಿಚ್ಚುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೆ.ಜೆ .ರಾಜು ಮೇಲೆ ರಮೇಶ್ ಹಲ್ಲೆ ನಡೆಸಿದ್ದಾನೆ. ಅಸ್ವಸ್ಥರಾದ ರಾಜು ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.