ಕುಂದಾಪುರ: ಗೂಡ್ಸ್ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣರಾದ ಬಸ್ ಚಾಲಕ ಹೈದರ್ ಬ್ಯಾರಿ ಎಂಬುವರಿಗೆ ಕುಂದಾಪುರದ 1ನೇ ಎ.ಸಿ.ಜೆ.(ಕಿ.ವಿ), ಜೆ.ಎಂ.ಎ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಶ್ರುತಿಶ್ರೀ ಒಂದು ವರ್ಷ ಆರು ತಿಂಗಳು ಕಾರಾಗೃಹ ಶಿಕ್ಷೆ, ದಂಡ ವಿಧಿಸಿ ಎಂದು ಆದೇಶಿಸಿದ್ದಾರೆ.
2024ರ ಡಿ.23ರಂದು ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಕುಂಭಾಶಿ ಸ್ವಾಗತ ಗೋಪುರದ ಹತ್ತಿರ ಖಾಸಗಿ ಬಸ್‌ನ್ನು ಚಾಲಕ ಹೈದರ್ ಬ್ಯಾರಿ ಎಂಬುವರು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನ ಚಾಲಕ ಚಂದ್ರ ಬಿಲ್ಲವ, ಸಹ ಪ್ರಯಾಣಿಕ ಪ್ರಕಾಶ ಮಂಜುನಾಥ ಮೃತಪಟ್ಟಿದ್ದರು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.