ಶನಿವಾರಸಂತೆ: ಗುಡುಗಳಲೆ ಬಳಿ ಮಂಗಳವಾರ ಖಾಸಗಿ ಬಸ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಕಾರು ಚಾಲಕ ಗಂಭಿರವಾಗಿ ಗಾಯಗೊಂಡಿದ್ದಾರೆ.
ಶನಿವಾರಸಂತೆ ಗುಂಡೂರಾವ್ ಬಡಾವಣೆ ನಿವಾಸಿ ರಜಾಕ್ ಗಾಯಗೊಂಡವರು. ರಜಾಕ್ ಸೋಮವಾರಪೇಟೆಯಿಂದ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮನೆಗೆ ಬರುತ್ತಿದ್ದಾಗ ಶನಿವಾರಸಂತೆಯಿಂದ ಸೋಮವಾರಪೇಟೆಗೆ ಹೋಗುತ್ತಿದ್ದ ಖಾಸಗಿ ಬಸ್‌ಗೆ ಗುಡುಗಳಲೆ ಬಳಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಕಾರು ಬಸ್ಸಿನ ಮುಂಭಾಗದೊಳಗೆ ತೂರಿ ಹೋಗಿದ್ದು, ಚಿಂತಾಜನಕದಲ್ಲಿರುವ ರಜಾಕ್‌ನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರಿನ ಮಂಭಾಗ ಕುಳಿತ್ತಿದ್ದ ರಜಾಕ್ ಪತ್ನಿ ಗಾಯಗೊಂಡಿದ್ದು, ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಬದಿ ಕುಳಿತಿದ್ದ ರಜಾಕ್ ಮಕ್ಕಳಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.