ಜಿಲ್ಲೆ

ಬಸ್​ ಇಳಿಯುವಾಗ ಚಿನ್ನದ ಸರ ದೋಚಿದ ಖದೀಮರು

Haveri - Kariyappa Aralikatti

ಹಾವೇರಿ: ಮಹಿಳೆಯೊಬ್ಬರು ಬಸ್​ ಇಳಿಯುವಾಗ ಕೊರಳಿನಲ್ಲಿದ್ದ 1.75 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಯಾರೋ ಖದೀಮರು ದೋಚಿರುವ ಘಟನೆ ನಗರದ ಕೇಂದ್ರೀಯ ಬಸ್​ ನಿಲ್ದಾಣದಲ್ಲಿ ನಡೆದಿದೆ.

ಹಾನಗಲ್ಲ ಪಟ್ಟಣದ ಕುಮಾರೇಶ್ವರ ನಗರದ ನಿವಾಸಿ ಸುವರ್ಣ ತಿರುಕಪ್ಪ ಅಣಜಿ (56) ಎಂಬುವರ ಸರ ದೋಚಿರುವುದು.

ಇವರು ಹಾನಗಲ್ಲದಿಂದ ಸಾರಿಗೆ ಸಂಸ್ಥೆ ಬಸ್​ ಹತ್ತಿ ಹಾವೇರಿಗೆ ಬಂದಿದ್ದಾರೆ. ಬಸ್​ ಇಳಿಯುವ ಸಮಯದಲ್ಲಿ ಯಾರೋ ಖದೀಮರು ಸರ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.