ಜಿಲ್ಲೆ

ಬಸ್ ವ್ಯವಸ್ಥೆ ಕಲ್ಪಿಸಲು ಮನವಿ

Belagavi

ಬೈಲಹೊಂಗಲ: ತಾಲೂಕಾದ್ಯಂತ ಶಾಲೆಗಳಿಗೆ ಶಿಕ್ಷಕರಿಗೆ ತೆರಳಲು ಸಮರ್ಪಕವಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಶಿಕ್ಷಕರು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶಾಲೆ ಪುನರಾರಂಭಿಸಲು ಸರ್ಕಾರ ಶಿಕ್ಷಕರಿಗೆ ಸುತ್ತೋಲೆ ಹೊರಡಿಸಿ, ಪಾಲಕರ ಆಭಿಪ್ರಾಯ ಸಂಗ್ರಹಕ್ಕೆ, ಶಾಲಾ ಪ್ರಾರಂಭ ಸಿದ್ಧತೆಗೆ ಶಾಲೆಗೆ ತೆರಳುವಂತೆ ಆದೇಶಿಸಿದೆ.

ಸಮರ್ಪಕವಾಗಿ ಬಸ್ ಸಂಚಾರ ಪ್ರಾರಂಭವಾಗದ್ದರಿಂದ ಶಿಕ್ಷಕರು ಶಾಲೆಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸೂಕ್ತ ಬಸ್ ಸೌಕರ್ಯ ಕಲ್ಪಿಸಲು ಒತ್ತಾಯಿಸಿದರು. ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಿಕ್ಷಕರ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಖನ್ನಿನಾಯ್ಕರ, ಎನ್.ಪಿ.ಎಸ್. ನೌಕರರ ಸಂಘದ ಖಜಾಂಚಿ ಎಸ್.ಎನ್.ಕುಲಕರ್ಣಿ, ಸಂಘದ ಕಾರ್ಯದರ್ಶಿ ವಿ.ಎಸ್.ಚರಂತಿಮಠ, ಎಸ್.ಜಿ.ಸಂಗೊಳ್ಳಿ ಇದ್ದರು.