ರಾಣೆಬೆನ್ನೂರ: ಬಸ್‌ನ್ನು ನಿರ್ಲಕ್ಷೃತನದಿಂದ ಚಲಾಯಿಸಿ ಆಟೋರಿಕ್ಷಾಗೆ ಡಿಕ್ಕಿ ಪಡಿಸಿ ಓರ್ವನ ಸಾವಿಗೆ ಕಾರಣವಾದ ಅಪರಾಧಿಗೆ 13 ತಿಂಗಳು ಜೈಲು ಶಿಕ್ಷೆ ಹಾಗೂ 7 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ವೈ.ಎಲ್. ಲಾಡಖಾನ್ ಶನಿವಾರ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಸೋಮಲಾಪುರ ಗ್ರಾಮದ ಗಣೇಶ ಗುಡ್ಡಪ್ಪ ಹೀಲದಹಳ್ಳಿ ಶಿಕ್ಷೆಗೊಳಗಾದ ಅಪರಾಧಿ.
ಈತ 2019 ಜುಲೈ 22ರಂದು ಶಾಲಾ ಬಸ್ ತೆಗೆದುಕೊಂಡು ರಾಣೆಬೆನ್ನೂರ ಕಡೆಯಿಂದ ಐರಣಿ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಎದುರಿಗೆ ಬಂದ ಆಟೋರಿಕ್ಷಾಗೆ ಡಿಕ್ಕಿ ಪಡಿಸಿದ್ದ. ಅಪಘಾತದಲ್ಲಿ ಆಟೋರಿಕ್ಷಾದಲ್ಲಿದ್ದ ಭೀರಪ್ಪ ಹುಲಿಕಟ್ಟಿ ಎಂಬುವನು ಸ್ಥಳದಲ್ಲಿಯೆ ಮೃತಪಟ್ಟು, ಮೂವರು ಗಾಯಗೊಂಡಿದ್ದರು.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಕ್ಷಾೃಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಧುಮತಿ ಸಿದ್ನ್ನೂರಕರ ವಾದ ಮಂಡಿಸಿದ್ದರು.