ಜಿಲ್ಲೆ

ಬಂಡಸಾಲೆಯಲ್ಲಿ ತಪ್ಪಿದ ಭಾರಿ ಬಸ್ ಅವಘಡ

ಸೌಮ್ಯ ಆರ್

ಗುರುಪುರ: ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಬಂಡಸಾಲೆ ಎಂಬಲ್ಲಿ ಮಂಗಳೂರು ಕಡೆಯಿಂದ ಅತಿ ವೇಗವಾಗಿ ಮತ್ತು ಓವರ್‌ಟೇಕ್ ಮಾಡುವ ದುಸ್ಸಾಹಸದಲ್ಲಿದ್ದ ಸಿಟಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಒಳ ರಸ್ತೆಗಿಳಿದು ನಿಂತ ಘಟನೆ ಗುರುವಾರ ಸಂಜೆ ನಡೆದಿದೆ.

ಬಜ್ಪೆ ಮೂಲದ ಸಿಟಿ ಬಸ್ ಮತ್ತೊಂದು ಬಸ್ಸನ್ನು ಓವರ್‌ಟೇಕ್ ಮಾಡುತ್ತ ಬಂದಿದೆ. ಬಂಡಸಾಲೆಯಲ್ಲಿ ಮತ್ತೊಂದು ಬಸ್ ಪ್ರಯಾಣಿಕರು ಇಳಿಯುತ್ತಿದ್ದರೆ, ಒಳರಸ್ತೆಯಲ್ಲಿ 2 ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳಿದ್ದು, ಹೆದ್ದಾರಿಯತ್ತ ಬರುತ್ತಿದ್ದರು. 22 ನಂಬರ್‌ನ ಸಿಟಿ ಬಸ್ ಮತ್ತಷ್ಟು ಮುಂದೆ ಸಾಗುತ್ತಿದ್ದರೆ ಭಾರಿ ಅಪಘಾತ ನಡೆಯುವುದರ ಜತೆಗೆ ಒಳರಸ್ತೆಯಲ್ಲಿರುವ ಹಲವು ವಿದ್ಯುತ್ ಕಂಬಗಳ ಮುರಿದು ಬೀಳುತ್ತಿದ್ದವು. ಒಳರಸ್ತೆಯಲ್ಲಿದ್ದ ನಾಮಫಲಕಕ್ಕೆ ಡಿಕ್ಕಿಯಾಗಿ ಬಸ್‌ನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ.