ಜಿಲ್ಲೆ

ಸುಟ್ಟ ಆಯಿಲ್​ ಕುಡಿದು ವೃದ್ಧ ಸಾವು

Haveri - Kariyappa Aralikatti

ಹಾನಗಲ್ಲ: ಕೋಲ್ಡ್​ ಡ್ರಿಂಕ್ಸ್​ ಬಾಟಲ್​ನಲ್ಲಿ ಹಾಕಿಟ್ಟಿದ್ದ ಸುಟ್ಟ ಆಯಿಲ್​ ಕುಡಿದು ವೃದ್ಧರೊಬ್ಬರು ಮೃತಪಟ್ಟ ಟನೆ ತಾಲೂಕಿನ ರಾಮತೀರ್ಥಹೊಸಕೊಪ್ಪ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ಚಾಂದಸಾಬ ದಿವಾನಸಾಬ ಹಸನಾಬಾದಿ (75) ಮೃತ ವೃದ್ಧ.

ಇವರ ಮನೆಯಲ್ಲಿ ಕೋಲ್ಡ್​ಡ್ರಿಂಕ್ಸ್​ ಬಾಟಲ್​ನಲ್ಲಿ ಟಿಸಿಗೆ ಹಾಕುವ ಸುಟ್ಟ ಆಯಿಲ್​ಅನ್ನು ಹಾಕಿಟ್ಟಿದ್ದರು. ಇದನ್ನು ಗಮನಿಸಿದ ಚಾಂದಸಾಬ ಕೋಲ್ಡ್​ಡ್ರಿಂಕ್ಸ್​ ಎಂದುಕೊಂಡು ಆಯಿಲ್​ ಕುಡಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.