ಹೊಸ ಕನ್ನಂಬಾಡಿ ಗ್ರಾಮಕ್ಕೆ ಕೆ.ಆರ್.ಸಾಗರ ಪೊಲೀಸರು ಭೇಟಿ ನೀಡಿ ಹುಲ್ಲಿನ ಮೆದೆಗೆ ಬೆಂಕಿ ಬಿದ್ದಿರುವುದನ್ನು ಪರಿಶೀಲಿಸಿದರು. 
ಜಿಲ್ಲೆ

ಭಸ್ಮವಾದ ಹುಲ್ಲಿನ ಮೆದೆ

ಅಭಿನಯ್ ಎಚ್.ಎಂ

ಕೆ.ಆರ್.ಸಾಗರ: ಹೊಸ ಕನ್ನಂಬಾಡಿ ಗ್ರಾಮದ ಸುಶೀಲಾ ಅವರ ಜಮೀನಿನಲ್ಲಿದ್ದ ಹುಲ್ಲಿನ ಮೆದೆಗೆ ಅಪರಿಚಿತರು ಬೆಂಕಿ ಹಾಕಿದ ಪರಿಣಾಮ ಭಸ್ಮವಾಗಿದೆ.

ಹುಲ್ಲಿನ ಮೆದೆ ಸಂಪೂರ್ಣ ನಾಶವಾಗಿದ್ದು, ಸುತ್ತಮುತ್ತ ಇದ್ದ ಐದು ತೆಗೆದಮರ ಮತ್ತು ಬಾಳೆ ಗಿಡಗಳಿಗೂ ಹಾನಿಯಾಗಿದೆ. ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪಿ.ಎಸೈ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.