ಜಿಲ್ಲೆ

ಒಂಟಿ ಮನೆಯಲ್ಲಿ ಕಳವು

ಕೋಲಾರ ಡೆಸ್ಕ್

ರಾಯಲ್ಪಾಡು: ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ರಾಯಲ್ಪಾಡು & ಗೌನಿಪಲ್ಲಿ ಮುಖ್ಯರಸ್ತೆ ಗುರುವಲೋಳ್ಳಗಡ್ಡ ಹೊರ ವಲಯದ ಒಂಟಿ ಮನೆಗೆ ಕನ್ನ ಹಾಕಿದ ಖದೀಮರು ಮಂಗಳವಾರ ಮನೆಯಲ್ಲಿದ್ದ ಹಣ, ಚಿನ್ನ, 70 ಸಾವಿರ ರೂ.ಗೂ ಹೆಚ್ಚು ಹಣ ಮತ್ತು ಜಮೀನು ದಾಖಲೆಗಳನ್ನು ಹೊತ್ತೊಯ್ದಿದ್ದಾರೆ.

ಈ ಕುರಿತು ಮನೆ ಮಾಲೀಕರು ರಾಯಲ್ಪಾಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಕೋಲಾರದ ಆಡಿಷ್​ನಲ್​ ಎಸ್​ಪಿ ಜಗದೀಶ್​, ಸಿಪಿಐ ಶಿವಕುಮಾರ್​, ಪಿಎಸ್​ಐ ಯೋಗೇಶ್​, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ರಾಯಲ್ಪಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.