ಆಲಮೇಲ ಠಾಣೆಯಲ್ಲಿ ಬಂಧಿತ ಆರೋಪಿಗಳು ಹಾಗೂ ವಶಕ್ಕೆ ಪಡೆದ ಸಾಮಗ್ರಿಗಳೊಂದಿಗೆ ಪೊಲೀಸ್ ತನಿಖಾ ತಂಡ. ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ನಾನಾಗೌಡ ಪೊಲೀಸ್‌ಪಾಟೀಲ, ಪಿಎಸ್‌ಐ ಅರವಿಂದ ಅಂಗಡಿ ಮತ್ತಿತರರಿದ್ದಾರೆ.  
ಜಿಲ್ಲೆ

ಮನೆಗಳ್ಳರ ಬಂಧನ; ಬೆಲೆ ಬಾಳುವ ಸಾಮಗ್ರಿ ವಶ

Vijyapura - Parsuram Bhasagi

ವಿಜಯಪುರ: ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 10.52 ಲಕ್ಷ ರೂ.ಮೌಲ್ಯದ ಬೆಲೆ ಬಾಳುವ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.

ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಶರಣಬಸು ಮಾಹಾದೇವ ಜಾಲವಾದ(31) ಹಾಗೂ ಪ್ರಕಾಶ ನಿಂಗಪ್ಪ ಕಂಬಾರ (21) ಬಂಧಿತ ಆರೋಪಿಗಳು. ಇವರಿಂದ ಅಂದಾಜು 8.60 ಲಕ್ಷ ರೂ.ಮೌಲ್ಯದ 86 ಗ್ರಾಂ ಬಂಗಾರದ ಆಭರಣಗಳು, ಅಂದಾಜು 67 ಸಾವಿರ ರೂಪಾಯಿ ಮೌಲ್ಯದ 67 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 1.25 ಲಕ್ಷ ರೂ.ಮೌಲ್ಯದ 5 ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಎಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ನಾನಾಗೌಡ ಪೊಲೀಸ್‌ಪಾಟೀಲ ಮಾರ್ಗದರ್ಶನದಲ್ಲಿ ಪಿಎಸ್‌ಐ ಅರವಿಂದ ಅಂಗಡಿ, ಎಸ್.ಎಂ. ಪಡಶೆಟ್ಟಿ ನೇತೃತ್ವದ ಎಚ್.ಟಿ. ಗೋಡೆಕಾರ, ಸಲೀಂ ಸವದಿ, ಸಿದ್ರಾಯ ಪಾಟೀಲ, ಎಸ್.ಬಿ. ಯತ್ನಾಳ, ವಿ.ಎಸ್. ಆಳೂರ, ಎಸ್.ಎಸ್. ಜಾಲಗೇರಿ, ಬಿ.ಎಸ್.ಮೇಡೆದಾರ, ಬಿ.ಜಿ. ಕ್ಷತ್ರಿ ಅವರನ್ನೊಳಗೊಂಡ ತಂಡ ಯಶಸ್ವಿಯಾಗಿ ಕಾಯಾಚರಣೆ ನಡೆಸಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.