ಚಿಂತಾಮಣಿ: ತಾಲೂಕಿನ ಕರಡಿಗುಟ್ಟ ಗ್ರಾಮದ ಮುನಿನಾರಾಯಣಮ್ಮ ಎಂಬುವರ ಮನೆ ಬೀಗ ಮುರಿದು ಕಳವು ಮಾಡಿದ್ದ ಕಳ್ಳನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಟನೆ ನಡೆದ 4 ಗಂಟೆಯಲ್ಲೇ ಬಂಧಿಸಿ, 22 ಗ್ರಾಂ ಚಿನ್ನದ ಸರ ಹಾಗೂ 15 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಅದೇ ಗ್ರಾಮದ ಟ್ರಾಕ್ಟರ್ ಚಾಲಕ ಸತೀಶ್ ಬಿನ್ ದೊಡ್ಡಈರಪ್ಪ(30) ಬಂಧಿತ ಕಳ್ಳ. ಎಸ್ಪಿ ಕುಶಲ್ ಚೌಕ್ಸೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪಿ.ಮುರಳೀಧರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶಿವರಾಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.