ಜಿಲ್ಲೆ

ಬಂಟರ ಸಂಘಕ್ಕೆ ಇನ್ನೂ ಎರಡೂವರೆ ಎಕರೆ ಜಾಗ ಮಂಜೂರು : ಬಂಟೆರೆ ಕೆಸರ್‌ಡ್ ಒಂಜಿ ಕುಸಲ್ ಉದ್ಘಾಟಿಸಿದ ಅಶೋಕ್ ರೈ ಭರವಸೆ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಪುತ್ತೂರು ಬಂಟರ ಸಂಘಕ್ಕೆ ಸರ್ಕಾರದಿಂದ 3 ಎಕರೆ ಜಾಗ ಮಂಜೂರಾಗಿದ್ದು, ಸಂಘಕ್ಕೆ ಸ್ವಂತ ಜಾಗವಾಗಬೇಕು ಎಂಬ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇನೆ. ಈ ಜಾಗ ಮುಂದಿನ 10 ದಿನದೊಳಗೆ ಬಂಟರ ಸಂಘದ ಹೆಸರಿಗೆ ಆಗಲಿದೆ. ಈ ಜಾಗದ ಪಕ್ಕ ಇರುವ ಇನ್ನೂ ಎರಡೂವರೆ ಎಕರೆ ಜಾಗವೂ ಬಂಟರ ಸಂಘಕ್ಕೆ ಮಂಜೂರಾಗುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು ಬಂಟರ ಸಂಘ ನೇತೃತ್ವದಲ್ಲಿ ಒಳಮೊಗ್ರು ಗ್ರಾಮದ ಕೈಕಾರದ ಪನಡ್ಕ ಪಳ್ಳತ್ತಾರು ಜೂಮಾದಿ ದೈವಸ್ಥಾನದ ಸಮೀಪದ ಸರಸ್ವತಿ ಹೊಸಲಕ್ಕೆ ಗದ್ದೆಯಲ್ಲಿ ಭಾನುವಾರ ‘ಬಂಟರೆ ಕೆಸರ್‌ಡ್ ಒಂಜಿ ಕುಸಲ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪುತ್ತೂರು ತಾಲೂಕು ಬಂಟರ ಸಂಘ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ನಾರಾಯಣ ರೈ ಬಾರಿಕೆ ಮತ್ತು ಸುಂದರ ರೈ ಕ್ರೀಡಾಕೂಟದ ದೀಪ ಬೆಳಗಿದರು. ಬೂಡಿಯಾರ್ ರಾಧಾಕೃಷ್ಣ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು, ದುರ್ಗಾಪ್ರಸಾದ್ ರೈ ಕುಂಬ್ರ, ಸಾಜ ರಾಧಾಕೃಷ್ಣ ಆಳ್ವ, ದಯಾನಂದ ರೈ ಕೋರ್ಮಂಡ, ಪುರಂದರ ರೈ ಮಿತ್ರಂಪಾಡಿ, ದಯಾನಂದ ರೈ ಮನವಳಿಕೆ, ನಿತ್ಯಾನಂದ ಶೆಟ್ಟಿ ಮನವಳಿಕೆ, ಗೀತಾ ಮೋಹನ್ ರೈ, ಕುಸುಮಾ ಪಿ.ಶೆಟ್ಟಿ, ಹರ್ಷ ಕುಮಾರ್ ರೈ ಮಾಡಾವು, ಮಲ್ಲಿಕಾ ಪ್ರಶಾಂತ್ ಪಕ್ಕಳ, ಶಿವನಾಥ ರೈ ಮೇಗಿನಗುತ್ತು, ದಂಬೆಕಾನ ಸದಾಶಿವ ರೈ, ಮೋಹನ ರೈ ನರಿಮೊಗರು, ರಾಜೀವ ರೈ ಕುತ್ಯಾಡಿ, ಕೃಷ್ಣಪ್ರಸಾದ್ ಆಳ್ವ, ಶಿವರಾಮ ಆಳ್ವ ಕುರಿಯ, ಸಂತೋಷ್ ಶೆಟ್ಟಿ ಸಾಜ, ಶಶಿಕಿರಣ್ ರೈ ನೂಜಿಬೈಲು, ರವಿಪ್ರಸಾದ್ ಶೆಟ್ಟಿ ಬನ್ನೂರು, ರಮೇಶ್ ರೈ ಡಿಂಬ್ರಿ, ಚೇತನ್ ರೈ ವಾಣಿ, ಸುಂದರ ರೈ ಮಂದಾರ, ದಯಾನಂದ ರೈ ಬೆಟ್ಟಂಪಾಡಿ, ಪ್ರಜ್ವಲ್ ರೈ ತೊಟ್ಲ, ನವೀನ್ ರೈ ಪನಡ್ಕ, ಗಿರೀಶ್ ರೈ ಮೂಲೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರಂಜಿನಿ ಶೆಟ್ಟಿ, ಸತ್ಯನಾರಾಯಣ ರೈ, ಮನ್ಮಥ ಶೆಟ್ಟಿ ಮತ್ತಿತರರಿದ್ದರು. ಬಂಟೆರೆ ಕೆಸರ್‌ಡ್ ಒಂಜಿ ಕುಸಲ್ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೈಕಾರ ಸ್ವಾಗತಿಸಿದರು.