ಜಿಲ್ಲೆ

ನೃತ್ಯ ಸ್ಪರ್ಧೆಯಲ್ಲಿ ಬಂಟರ ಸಂಘ ಪ್ರಥಮ

ಸೌಮ್ಯ ಆರ್

ಮೂಡುಬಿದಿರೆ: ಬಂಟ್ವಾಳ ಬಂಟರ ಸಂಘದ ವಿಂಶತಿ ಕಾರ್ಯಕ್ರಮದ ಅಂಗವಾಗಿ ನಡೆದ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮೂಡುಬಿದಿರೆ ಬಂಟರ ಮಹಿಳಾ ಘಟಕದ ಸದಸ್ಯರು ಪ್ರಥಮ ಬಹುಮಾನ ಪಡೆದಿದ್ದಾರೆ.

ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶಿವಪ್ರಸಾದ್ ಹೆಗ್ಡೆ ಬಹುಮಾನ ಸ್ವೀಕರಿಸಿದರು. ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ವಕೀಲರಾದ ಅಶ್ವನಿ ಕುಮಾರ್ ರೈ, ಉದ್ಯಮಿಗಳಾದ ಎಂ.ಸಿ.ಆರ್ ಶೆಟ್ಟಿ, ಡಾ.ರಾಜ ಮೋಹನ್ ಶೆಟ್ಟಿ, ಸುಧಾಕರ್ ಶೆಟ್ಟಿ ಸುಗ್ಗಿ, ಹರ್ಷ ಮೇಲಾಂಟ, ಪ್ರಸನ್ನ ಶಂಕರ್ ಶೆಟ್ಟಿ ಹುಬ್ಬಳ್ಳಿ ಹಾಗೂ ಬಂಟವಾಳ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿತಿನ್ ನೃತ್ಯ ಸಂಯೋಜನೆ ಮಾಡಿದರು.