ಮಂಗಳೂರು: ವಿಶ್ವ ಬಂಟರ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾಗಿ ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅಧಿಕಾರ ಸ್ವೀಕರಿಸಿದರು.
ಸ್ಟಾನ್ಸ್ ಗ್ರೂಪ್ ಕಂಪನಿಯ ನಿವೃತ್ತ ನಿರ್ದೇಶಕ ಕೆ.ಸಚ್ಚಿದಾನಂದ ಹೆಗ್ಡೆ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಪದಾಧಿಕಾರಿಗಳಿಗೆ 2022ರವರೆಗೆ ಅವಧಿಯಿರುತ್ತದೆ.
ಉಪಾಧ್ಯಕ್ಷರಾಗಿ ಕುಶಾಲ್ ಎಸ್.ಹೆಗ್ಡೆ ಪುಣೆ, ಹೊಸದೆಹಲಿ ಉಪಾಧ್ಯಕ್ಷರಾಗಿ ರೀತಾ ಶೆಟ್ಟಿ, ಕಾರ್ಯದರ್ಶಿಯಾಗಿ ಸುಧೀರ್ ಕುಮಾರ್ ಶೆಟ್ಟಿ ವೈ, ಖಜಾಂಚಿಯಾಗಿ ರಘುಚಂದ್ರ ಶೆಟ್ಟಿ, ಯೋಜನಾ ನಿರ್ದೇಶಕರಾಗಿ ಡಾ.ಬಿ.ಸಂಜೀವ ರೈ ಆಯ್ಕೆಯಾದರು.
ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರುವ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ, ವಿದ್ಯಾರ್ಥಿವೇತನ, ವೈದ್ಯಕೀಯ ನೆರವು, ಕ್ರೀಡೆ ಮತ್ತು ಸಾಂಸ್ಕತಿಕ ಚಟುವಟಿಕೆಗಳಿಗೆ ಬೆಂಬಲ ನೀಡುವ ಮೂಲಕ ಈ ಟ್ರಸ್ಟ್ ಸಹಾಯ ಮಾಡುತ್ತಿದೆ.