ಜಿಲ್ಲೆ

ಫೆ.7ರಿಂದ ಬಂಟ್ ಪ್ರೀಮಿಯರ್ ಲೀಗ್

Mangaluru - Hariprasad Rai



ಮಂಗಳೂರು : ಅಡ್ಯಾರ್‌ನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಫೆ.7ರಿಂದ 9ರವರೆಗೆ ನಡೆಯಲಿರುವ ಬಂಟ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ನ ಜರ್ಸಿ ಬಿಡುಗಡೆ , ಟ್ರೋಫಿ ಅನಾವರಣ ಹಾಗೂ ತಂಡಗಳ ಹರಾಜು ಕಾರ್ಯಕ್ರಮ ಮರವೂರು ಶೂಲಿನ್ ಪ್ಯಾಲೇಸ್‌ನಲ್ಲಿ ನಡೆಯಲಿದೆ.
ಬಂಟ ಸಮುದಾಯದ ಸಂಘಟನೆ ಹಾಗೂ ಸಮಾಜ ಸೇವೆಗಳ ಬಗ್ಗೆ ರಾಜಗೋಪಾಲ್ ರೈ ಅವರು ಮಾಹಿತಿ ನೀಡಿದರು.
ಯುವ ಮುಂದಾಳು ಮಿಥುನ್ ರೈ ತಂಡಗಳಿಗೆ ಶುಭ ಹಾರೈಸಿದರು. ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ
ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ, ಮಾಜಿ ಎಂಎಲ್‌ಸಿ ಮೋನಪ್ಪ ಭಂಡಾರಿ, ಉದ್ಯಮಿ ಸುಂದರ್ ಶೆಟ್ಟಿ, ಯುವ ನಾಯಕ ಮಿಥುನ್ ರೈ, ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ, ಉದ್ಯಮಿ ಚಂದ್ರಹಾಸ ಶೆಟ್ಟಿ, ಗಣೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಒಟ್ಟು 10 ತಂಡಗಳು ಭಾಗವಹಿಸುವ. ಈ ಪಂದ್ಯಾಟದ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇದೇ ಸಂದರ್ಭ ನಡೆಯಿತು. ಆಯ್ಕೆ ಪ್ರಕ್ರಿಯೆಯನ್ನು ಚಿತ್ರನಟ ರೂಪೇಶ್ ಶೆಟ್ಟಿ ನಡೆಸಿಕೊಟ್ಟರು. ಮನೀಷ್ ಶೆಟ್ಟಿ ಸಹಕರಿಸಿದರು.
ಪಂದ್ಯಾಟದ ಅಂಗವಾಗಿ ತುಳುನಾಡಿನ ವಿಶಿಷ್ಟ ಆಹಾರ ಸಂಸ್ಕೃತಿಯನ್ನು ಬಿಂಬಿಸುವ ಆಹಾರ ಮೇಳ ಕೂಡ ನಡೆಯಲಿದೆ ಎಂದು
ಪಂದ್ಯಾಟದ ಸಂಘಟಕರಾದ ಸಚಿನ್‌ರಾಜ್ ರೈ ಮತ್ತು ಪ್ರಸಾದ್ ಶೆಟ್ಟಿ ತಿಳಿಸಿದರು. ಶ್ರೇಯಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.