ಜಿಲ್ಲೆ

ಶಿರಕೋಳದಲ್ಲಿ ಜೋಡೆತ್ತು ಮೆರವಣಿಗೆ

Dharwada - Basavaraj Idli

ಹುಬ್ಬಳ್ಳಿ: ನವಲಗುಂದ ತಾಲೂಕಿನ ಶಿರಕೋಳದಲ್ಲಿ ಶ್ರೀ ಬಸವ ಜಯಂತಿ ಅಂಗವಾಗಿ ಮೇ 9ರಿಂದ ವಿವಿಧ ಧಾಮಿರ್ಕ, ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮೇ 9ರಂದು ಸಂಜೆ 7ಕ್ಕೆ ದಾನಿಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಹಿರೇಮಠ ಪಟ್ಟಾಧ್ಯಕ್ಷರಾದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಶ್ರೀ ಚಿದಾನಂದ ಸ್ವಾಮೀಜಿ ನೇತೃತ್ವ ವಹಿಸುವರು.
ಮೇ 10ರಂದು ಸಂಜೆ 5ಕ್ಕೆ ಜೋಡೆತ್ತುಗಳ ಭವ್ಯ ಮೆರವಣಿಗೆಯು ಸಕಲ ವಾದ್ಯ ಮೇಳದೊಂದಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.