ಜಿಲ್ಲೆ

ಬುಲೆರೋ ಡಿಕ್ಕಿ ಬೈಕ್​ ಹಿಂಬದಿ ಸವಾರ ಸಾವು

ಹಾವೇರಿ: ಬುಲೆರೋ ವಾಹನ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಹಿಂಬದಿ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಹನುಮನಹಳ್ಳಿ ಬಳಿ ಬುಧವಾರ ನಡೆದಿದೆ.

ತಾಲೂಕಿನ ಕನವಳ್ಳಿ ಗ್ರಾಮದ ಆಂಜನೇಯ ನಿಂಗಪ್ಪ ಸೊಟ್ಟಪ್ಪನವರ ಮೃತ ವ್ಯಕ್ತಿ.

ಇವರು ಬೈಕ್​ ಮೇಲೆ ಕನವಳ್ಳಿಯಿಂದ ಹಾವೇರಿಗೆ ಬರುತ್ತಿದ್ದ ಸಮಯದಲ್ಲಿ ಬುಲೆರೋ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಆಂಜನೇಯ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.