ಜಿಲ್ಲೆ

ಓಟದಲ್ಲಿ ಬುಕ್ಕಿಟಗಾರ ಸಹೋದರರ ಕಮಾಲ್

ವೀರೇಶ ಸೌದ್ರಿ

ಶಿರಹಟ್ಟಿ: ಗದಗದಲ್ಲಿ ಶನಿವಾರ ಆಯೋಜಿಸಿದ್ದ ಪ್ರಾಥಮಿಕ ಮತ್ತ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಎಸ್‌ಎಫ್‌ಸಿ ಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಯೂನಸ್ ಬುಕ್ಕಿಟಗಾರ ಪ್ರಾಥಮಿಕ ಶಾಲಾ ವಿಭಾಗ 400 ಮೀಟರ್ ಓಟದಲ್ಲಿ ಮತ್ತು ಮೊಹಮ್ಮದ್ ಇಮ್ರಾನ್ ಬುಕ್ಕಿಟಗಾರ ಪ್ರೌಢಶಾಲಾ ವಿಭಾಗ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.

ಇವರಿಬ್ಬರು ಸಹೋದರರು. ವಿದ್ಯಾರ್ಥಿಗಳ ಸಾಧನೆಗೆ ಶಾಲೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದೆ.