ಸಿಂಧನೂರು ಕಕ ರಸ್ತೆ ಸಾರಿಗೆ ನಿಗಮದ ಸ್ಥಳೀಯ ಘಟಕ ವ್ಯವಸ್ಥಾಪಕ ಹೊನ್ನಪ್ಪ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ, ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ, ತಾಲೂಕು ಉಪಾಧ್ಯಕ್ಷ ಅಶೋಕ, ತಾಲೂಕು ಸಂಚಾಲಕ ಖಾದರ್‌ಬಾಷಾ ಇತರರಿದ್ದರು. 
ಜಿಲ್ಲೆ

ಬುಕ್ಕನಹಟ್ಟಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲಿ

ಸಿಂಧನೂರು: ತಾಲೂಕಿನ ಗಡಿಗ್ರಾಮ ಬುಕ್ಕನಹಟ್ಟಿಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ವಿದ್ಯಾರ್ಥಿಳು ಸ್ಥಳೀಯ ಘಟಕ ವ್ಯವಸ್ಥಾಪಕ ಹೊನ್ನಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ತಾಲೂಕಿನ ಬುಕ್ಕನಹಟ್ಟಿ ಗ್ರಾಮ ತಾಲೂಕು ಕೇಂದ್ರದಿಂದ 30 ಕಿಮೀ ಅಂತರದಲ್ಲಿದ್ದು, ಗಡಿ ಗ್ರಾಮವಾಗಿದೆ. ಇಲ್ಲಿಗೆ ಸಾರಿಗೆ ಬಸ್ ಸಂಚಾರ ಸೌಕರ್ಯ ಇಲ್ಲ. ಇದರಿಂದ ಶಾಲಾ-ಕಾಲೇಜಿಗೆ ಹೋಗುವ 50-60 ವಿದ್ಯಾರ್ಥಿಗಳು ದಿನವೂ ಬೆಳಗ್ಗೆ ಬುಕ್ಕನಹಟ್ಟಿಯಿಂದ 2 ಕಿಮೀ ದೂರದ ಉಮಲೂಟಿಗೆ ನಡೆದುಕೊಂಡು ಬಂದು, ಅಲ್ಲಿಂದ ಸಿಂಧನೂರು ನಗರಕ್ಕೆ ಹೋಗುತ್ತಿದ್ದಾರೆ.

ಮಳೆಗಾಲದಲ್ಲಿ ಈ ವಿದ್ಯಾರ್ಥಿಗಳು ಅನಿವಾರ್ಯವಾಗಿ ಶಾಲಾ-ಕಾಲೇಜಿಗೆ ಗೈರಾಗುವಂತಾಗಿದೆ. ಇದು ಇವರ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತಿದೆ. ಗ್ರಾಮದಿಂದ ನಗರದ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವವರು, ಗರ್ಭಿಣಿಯರು, ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಕಳೆದ ಎರಡು ವಷರ್ಗಳ ಹಿಂದೆ ಬಸ್ ಸಂಚಾರ ಸೌಲಭ್ಯ ಇತ್ತು.

ಆದರೆ ನಂತರ ವಿನಾಃಕಾರಣ ಸ್ಥಗಿತಗೊಳಿಸಲಾಗಿದ್ದು, ಗ್ರಾಮಸ್ಥರು ಪಟ್ಟಣ, ನಗರಗಳಿಗೆ ಹೋಗಲು ತೊಂದರೆಯಾಗಿದೆ. ಕೂಡಲೇ ಈ ಮಾರ್ಗದಲ್ಲಿ ಸಾರಿಗೆ ಸಂಸ್ಥೆ ಬಸ್ ಆರಂಭಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ, ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ, ತಾಲೂಕು ಉಪಾಧ್ಯಕ್ಷ ಅಶೋಕ, ತಾಲೂಕಾ ಸಂಚಾಲಕ ಖಾದರ್‌ಬಾಷಾ, ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಆದಿ ಹಿರೇಮಠ ಇತರರಿದ್ದರು.