ಗೋಕಾಕ: ನಗರದ ಮಹಾಲಕ್ಷಿ$್ಮ ಸಭಾಭವನದಲ್ಲಿ ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್ ಮತ್ತು ಯುಎಸ್ ಕಮ್ಯೂನಿಕೇಷನ್ ಸಹಯೋಗದೊಂದಿಗೆ ಆ.22ರಿಂದ 24ರವರಗೆ ಕಟ್ಟಡ ಸಾಮಗ್ರಿಗಳು, ಒಳ&ಹೊರ ವಿನ್ಯಾಸ ಮತ್ತು ಪೀಠೋಪಕರಣ, ಗೃಹಸಾಲ, ಬಿಲ್ಡ್ಟೆಕ್--&2025 ಸಮಗ್ರ ಕಟ್ಟಡ ಸಾಮಗ್ರಿ ಬೃಹತ್ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಚಿದಾನಂದ ದೇಮಶೆಟ್ಟಿ ಹೇಳಿದರು.
ಗೋಕಾಕ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ದಿನದ ವಸ್ತು ಪ್ರದರ್ಶನದಲ್ಲಿ ಒಂದೇ ಸೂರಿನಡಿಯಲ್ಲಿ ಕಟ್ಟಡ ಸಾಮಗ್ರಿಗಳಾದ ಸಿಮೆಂಟ್, ಬ್ರಿಕ್ಸ್, ಅಗ್ರಿಗೇಟ್ ಎಂ ಸ್ಯಾಂಡ್, ಸ್ಟೀಲ್, ಪ್ಲಂಬಿಂಗ್, ಟೈಲ್ಸ್, ಪ್ಲೆವುಡ್, ಇಂಟಿರಿಯರ್&ಎಕ್ಸ್ಪೀರಿಯರ್ ಪರಿಕರ, ಸೋಲಾರ್ ಮತ್ತು ಎಲೆಕ್ಟ್ರಿಕಲ್ ಉತ್ಪನ್ನ, ಗುಣಮಟ್ಟದ ಸೆಕ್ಯೂರಿಟಿ ಸಾಮಗ್ರಿ, ಯುಪಿವಿಸಿ ಡೋರ್ಸ್ ಮತ್ತು ವಿಂಡೋಸ್ ಪೇಂಟ್ ಮತ್ತು ಅಡೆಸ್ಟೀವ್, ವಾಟರ್ ಪ್ರೂಫಿಂಗ್ ಸೇರಿ ಹಲವು ವಿನ್ಯಾಸಗಳ ಸಾಮಗ್ರಿ ಸಿಗುತ್ತವೆ. ಪ್ರಾಪರ್ಟಿ ಸಂಬಂಧಿತ ಮಳಿಗೆ ತೆರೆಯಲಾಗಿದೆ. ಗ್ರಾಹಕರು ್ಲಾಟ್ ಮತ್ತು ನಿವೇಶನ ಖರೀದಿಸಬಹುದು ಮತ್ತು ವಿಶೇಷ ಆಕರ್ಷಣೆಯಾಗಿ ಆಟೋ ಎಕ್ಸ್ಪೋ ಆಯೋಜಿಸಲಾಗಿದೆ ಎಂದರು. ಆರ್.ಎಂ. ಉತ್ತೂರ, ವಿನಾಯಕ ರಾವಳ, ಎಸ್.ಡಿ. ಉಜ್ಜನಕೊಪ್ಪ, ಕೃಷ್ಣಾ ಕುರಬಗಟ್ಟಿ, ವಿಶ್ವನಾಥ ಮಾಸ್ತಿಹೊಳಿ, ಕಲ್ಮೇಶ ತೋಟದ ಇತರರಿದ್ದರು.