ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿ ಬೆಂಗಳೂರಿನಲ್ಲಿ ಚಮ್ಮಾರ ಹರಳಯ್ಯ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಲು ಯತ್ನಿಸುವುದಾಗಿ ಶಾಸಕ ಸತೀಶ ಸೈಲ್ ಭರವಸೆ ನೀಡಿದರು.
ಕರ್ನಾಟಕ ಚಮ್ಮಾರ ಹರಳಯ್ಯ ಸಂಘದ ರಾಜ್ಯ ಶಾಖೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ಸಂಘಟನೆಗಳು ಬೆಳೆಯಬೇಕು ಎಂದರು.
ಸಂಘಟನೆಯ ಅಧ್ಯಕ್ಷ ಜಗದೀಶ ಬೆಟಗಾರಿ ಮಾತನಾಡಿ, ಸಂಘಟನೆಯು ಸಮಾಜದ ಜನರ ಅಭಿವೃದ್ಧಿಗೆ ಹಲವು ಕಾರ್ಯ ಮಾಡುತ್ತಿದೆ. ಬೆಂಗಳೂರಿನಲ್ಲಿ ಜಾಗ ಖರೀದಿಸಲಾಗಿದೆ. ಅಲ್ಲಿ ಸಮುದಾಯ ಭವನ, ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಹಿರಿಯರಾದ ಕಾರವಾರದ ರಾಮದಾಸ ಹಳನಕರ್, ಅಂಕೋಲಾದ ಕಮಲಾಕರ ಬೋರ್ಕರ್, ಕುಮಟಾದ ಶೇಷಪ್ಪ ಪಾಲೇಕರ್, ಹೊನ್ನಾವರದ ರತ್ನಾಕರ ಪಾವಸ್ಕರ್, ಭಟ್ಕಳದ ಮೋಹನ ಶಿರಾಲಿಕರ್ ಅವರಿಗೆ ಸಂತ ಹರಳಯ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅಲ್ಲದೆ, ವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಾದ ವಿನೀತ ನಾಮದೇವ ಕುಡಾಳಕರ್, ಅದ್ವೈತ ಕಿರಣ ಪಾವಸ್ಕರ್, ತೇಜಲ್ ಗಿರೀಶ ಬೋರ್ಕರ್, ರೋಹನ್ ದಿಲೀಪ ಕುಡಾಳಕರ್, ಓಂಕಾರ ಗಣೇಶ ಕುಡಾಳಕರ್ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಬರುವ ಜನವರಿ ಮೊದಲ ವಾರದಲ್ಲಿ ಕರಾವಳಿ ಉತ್ಸವ
ಸಂಘಟನೆಯ ಕಾರ್ಯದರ್ಶಿ ಸುನೀಲ ಮದನಬಾವಿ, ಖಜಾಂಚಿ ಮಂಜುನಾಥ ಹಂಜಗಿಮ, ಉಪಾಧ್ಯಕ್ಷರಾದ ಪರಶುರಾಮ ಅರಕೇರಿ, ಭೀಮರಾವ್ ಕಟ್ಟಿಮನಿ, ಪದಾಽಕಾರಿಗಳಾದ ವಾಸು ಬಿ., ನಾಗರಾಜ ಕಲಾದ್ಗಿ, ವೆಂಕಟೇಶ ಬೆಂಡೆವಾಡಿ, ರಾಘವೇಂದ್ರ ದೊಡ್ಮನಿ, ಸುನೀಲ ಹೊಂಗಲ್, ನಂದನ ಬೋರ್ಕರ್ ಇತರರು ಇದ್ದರು. ಸಂಘಟನೆಯ ಕಾರ್ಯದರ್ಶಿ ದೀಪಕ ಕುಡಾಳಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.