ಗಂಗಾವತಿ ತಾಲೂಕಿನ ಹನುಮನಹಳ್ಳಿಯ ಗ್ರೀನ್ ಸ್ಟೋನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಂಜಿನಿಯರ್‌ಗಳಾದ ಚೇತನಕುಮಾರ ಹಿರೇಮಠ ಮತ್ತು ಶಾಂತಕುಮಾರರಿಗೆ ನೇಶನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.  
ಜಿಲ್ಲೆ

ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ಇಂಜಿನಿಯರ್ಸ್‌ಗಳ ಪಾತ್ರ ಪ್ರಮುಖ

ಶಶಿಧರ ಎಲ್

ಗಂಗಾವತಿ: ತಾಲೂಕಿನ ಹನುಮನಹಳ್ಳಿಯ ಗ್ರೀನ್ ಸ್ಟೋನ್ ಸಭಾಂಗಣದಲ್ಲಿ ರೋಟರಿ ಕ್ಲಬ್ ತಾಲೂಕು ಘಟಕದಿಂದ ಇಂಜಿನಿಯರ್ಸ್‌ ಡೇ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಆಧುನಿಕ ಭಾರತ ಪಿತಾಮಹಾ ಸರ್.ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ನಂತರ ನಗರದ ಇಂಜಿನಿಯರ್‌ಗಳಾದ ಚೇತನಕುಮಾರ ಹಿರೇಮಠ ಮತ್ತು ಶಾಂತಕುಮಾರಗೆ ನೇಶನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕ್ಲಬ್ ಕಾರ್ಯದರ್ಶಿ ವಾಸು ಕೊಳಗದ್ ಮಾತನಾಡಿ, ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ಇಂಜಿನಿಯರ್ ಪಾತ್ರ ಪ್ರಮುಖವಾಗಿದ್ದು, ನಗರ ಸೌಂದರೀಕರಣಕ್ಕೆ ಶ್ರಮಿಸಿದ್ದಾರೆ. ಅಣೆಕಟ್ಟು, ಕಾಲುವೆಗಳೇ ಇಂಜಿನಿಯರ್‌ಗಳ ಕಾರ್ಯಕ್ಷಮತೆಗೆ ಸಾಕ್ಷಿ ಎಂದರು.

ಕ್ಲಬ್ ಅಧ್ಯಕ್ಷ ಟಿ.ಆಂಜನೇಯ ಮಾತನಾಡಿದರು. ಪದಾಧಿಕಾರಿಗಳಾದ ಮಹೇಶ ಸಾಗರ, ಸಲಾವುದ್ದೀನ್ ಸುರಪುರ, ಪುರುಷೋತ್ತಮ ಪಟೇಲ್,ಅಜಿತ್‌ರಾಜ ಸುರಾನಾ, ಎಂ ರಾಘವೇಂದ್ರರಾವ್, ದೊಡ್ಡಯ್ಯ ಜನಾದ್ರಿ ಸೇರಿ ಕ್ಲಬ್ ಸದಸ್ಯರಿದ್ದರು.