ಜಿಲ್ಲೆ

ಕಟ್ಟಡ ನಿರ್ಮಾಣದ ವೇಳೆ ವಿದ್ಯುತ್​ ತಗುಲಿ ಸಾವು

Haveri - Kariyappa Aralikatti

ಹಾನಗಲ್ಲ: ನಿಮಾರ್ಣ ಹಂತದ ಕಟ್ಟಡ ಮೇಲೆ ವಿದ್ಯುತ್​ ತಗುಲಿ ಕಾಮಿರ್ಕನೊಬ್ಬ ಮೃತಪಟ್ಟ ಘಟನೆ ಪಟ್ಟಣದ ಕಲ್ಲಹ್ಕಲ್ಲ ಓಣಿ ಗುರುವಾರ ನಡೆದಿದೆ.

ಮುಜಾಫರ ಬಾಷಾಸಾಬ ಲೋಹರ (40) ಮೃತ ವ್ಯಕ್ತಿ.

ಈತ ನಿಮಾರ್ಣ ಹಂತದ ಕಟ್ಟಡ ಮೇಲೆ ಕಬ್ಬಿಣದ ಬಾರನ್ನು ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಬಾರ ವಿದ್ಯುತ್​ ತಂತಿಗೆ ತಗುಲಿ ವಿದ್ಯುತ್​ ಸ್ಪಷಿರ್ಸಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.