ವಿಜಯವಾಣಿ ಸುದ್ದಿಜಾಲ ಕುಂದಾಪುರ ಶಿಕ್ಷಣ ಕ್ಷೇತ್ರ ಬಹಳ ಸಮಸ್ಯೆಗಳಿರುವ ಕ್ಷೇತ್ರ. ಶಿಕ್ಷಣದ ಮೂಲಕ ಸವಾಜ ಕಟ್ಟುತ್ತಿರುವ ಸಂದರ್ಭದಲ್ಲಿ ಶಿಕ್ಷಕರ ಪರಿಶ್ರಮವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಮೌನವಾಗಿ ಯಾವುದೇ ವಿವಾದಗಳಿಲ್ಲದೆ ಜಾಗೃತ ಸವಾಜ ನಿರ್ವಾಣ ವಾಡುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಶುಕ್ರವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು. ಅನೇಕ ಸಂದರ್ಭಗಳಲ್ಲಿ ಸಂಕಷ್ಟ, ಸಮಸ್ಯೆ ಬಂದಾಗ ಈ ಸವಾಜದಲ್ಲಿ ಮೌನವಾಗಿಯೇ ಜನಾಭಿಪ್ರಾಯ ಮೂಡಿಸುವ ಸಾಮರ್ಥ್ಯ ಶಿಕ್ಷಕರಿಗಿದೆ. ಶಿಕ್ಷಣದ ಮೂಲಕ ಸವಾಜವನ್ನು ಹೇಗೆ ಕಟ್ಟಬಹುದು, ಹೇಗೆ ಕಟ್ಟುತ್ತಾ ಇದ್ದೇವೆ ಎಂಬುದು ಮುಖ್ಯವಾಗಿದೆ. ನಾವೆಲ್ಲ ವಿದ್ಯಾವಂತರಾದರೂ ಇನ್ನೂ ಸಂಸ್ಕಾರಯುತವಾದ ವಾನಸಿಕತೆ ಬೆಳೆಸಿಕೊಂಡಿಲ್ಲ. ತಮ್ಮ ಸುತ್ತಲಿನ ಸವಾಜದ ವ್ಯವಸ್ಥೆ ಅರ್ಥೈಸಿಕೊಳ್ಳಬೇಕಾದ ಶಿಕ್ಷಣ ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಶಾಸಕ ಎ.ಕಿರಣ್‌ಕುವಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ತಾಪಂ ಇಒ ಡಾ.ರವಿಕುವಾರ್ ಹುಕ್ಕೇರಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ ಕ್ರಾಸ್ಟೊ ಮಾತನಾಡಿದರು. ಸಹಶಿಕ್ಷಕ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಉಪನ್ಯಾಸ ನೀಡಿದರು. ನಿವೃತ್ತಿ ಹೊಂದಿದ, ಸಾಧಕ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಆಚಾರ್ಯ ಅವರ ಯಕ್ಷಗಾನ ಪ್ರಸಂಗದ ಪುಸ್ತಕ ಬಿಡುಗಡೆ ವಾಡಲಾಯಿತು. ದಾನಿಗಳಾದ ಎ.ಶಂಕರ ಐತಾಳ್, ನವೀನಚಂದ್ರ ಹೆಗ್ಡೆ, ಕುಂದಾಪುರ ಬಂಟರ ಯಾನೆ ನಾಡವರ ಸಂದ ಸಂಚಾಲಕ ಸಂಪತ್‌ಕುವಾರ್ ಶೆಟ್ಟಿ, ಶಿಕ್ಷಕರ ವಿವಿಧ ಸಂಟನೆಗಳ ಅಧ್ಯಕ್ಷರಾದ ಗಣೇಶ ಕುವಾರ್ ಶೆಟ್ಟಿ, ಉದಯಕುವಾರ್ ಶೆಟ್ಟಿ, ಶಿವರಾಮ, ಕುಸುವಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಉದಯ ಮಡಿವಾಳ, ಬಾಲಕೃಷ್ಣ ಶೆಟ್ಟಿ, ಪ್ರದೀಪಕುವಾರ್ ಶೆಟ್ಟಿ, ಪ್ರದೀಪಕುವಾರ್ ಭಂಡಾರಿ, ಚಂದ್ರ ನಾಯ್ಕ, ಉಷಾಲತಾ ಶೆಟ್ಟಿ, ಅಶೋಕ ನಾಯ್ಕ, ಸತ್ಯನಾರಾಯಣ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಸ್ವಾಗತಿಸಿದರು. ಬಿಆರ್‌ಪಿಗಳಾದ ಸಂತೋಷಕುವಾರ್ ಶೆಟ್ಟಿ, ಶಶಿಧರ ಶೆಟ್ಟಿ, ಸುಕನ್ಯಾ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ ನಾಯ್ಕ ವಂದಿಸಿದರು.
ಮುಂದಿನ ಪೀಳಿಗೆ ಶಕ್ತಿಯುತವಾಗಿ ಭಾರತದ ಪ್ರಜೆಯಾಗಿ ರೂಪುಗೊಳ್ಳಬೇಕಾದರೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನಿವಾರ್ಯತೆ ನಮ್ಮ ಮುಂದಿದೆ. ಶಿಕ್ಷಣ ನೀತಿ ಬಗ್ಗೆ ಸವಾಜದ, ಶಿಕ್ಷಕರ ಮಧ್ಯೆ ಚರ್ಚೆ ಆಗಬೇಕು. ಸವಾಜದಲ್ಲಿ ವಿದ್ಯಾವಂತರು, ಬುದ್ಧಿವಂತರು, ಜ್ಞ್ಞಾನಿಗಳು ಮೌನ ವಹಿಸಿದರೆ ಒಳ್ಳೆಯ ಕೆಲಸ ನಿರ್ಲಿಪ್ತವಾಗುವ ಅಪಾಯವಿದೆ. ಕೋಟ ಶ್ರೀನಿವಾಸ ಪೂಜಾರಿ, ಸಂಸದ