ಜಿಲ್ಲೆ

ಉತ್ತಮ ಶಿಕ್ಷಣದಿಂದ ಸದೃಢ ದೇಶ ನಿರ್ಮಾಣ: ಸ್ವಾಮಿ ಮಹಾಮೇಧಾನಂದಜೀ

ಮೈಸೂರು: ಉತ್ತಮ ಶಿಕ್ಷಣ ಪಡೆದವರಿಂದ ದೇಶದ ಸದೃಢ ನಿರ್ಮಾಣ ನಿರೀಕ್ಷಿಸಬಹುದು ಎಂದು ಶ್ರೀ ರಾಮಕೃಷ್ಣ ಆಶ್ರಮದ ರಿಮ್ಸ್ ಸಂಯೋಜಕರಾದ ಸ್ವಾಮಿ ಮಹಾಮೇಧಾನಂದಜೀ ಅಭಿಪ್ರಾಯಪಟ್ಟರು.

ನಗರದ ಶೇಷಾದ್ರಿ ಅಂ್ಯುರ್ ರಸ್ತೆಂುಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ವಾತನಾಡಿದರು.

ವಿದ್ಯೆ ಎಂದರೆ ಶಕ್ತಿ ಮತ್ತು ಜ್ಞಾನ, ಇದನ್ನು ಪಡೆಂುುವುದಕ್ಕೆ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ಕಲಿತ ವಿದ್ಯೆಯನ್ನು ಂಾವುದಕ್ಕೆ ಉಪಂೋಗಿಸಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ಸ್ಪಷ್ಟತೆ ಇರಬೇಕು ಎಂದು ಸಲಹೆ ನೀಡಿದರು.

ರಾಜಕೀಂು ವ್ಯಕ್ತಿಗಳು ಹಾಗೂ ಉದ್ಯಮಿಗಳಿಂದ ಸದೃಢ ದೇಶ ನಿರ್ಮಾಣವನ್ನು ನಿರೀಕ್ಷಿಸುವುದಕ್ಕಿಂತ ಉತ್ತಮ ಶಿಕ್ಷಣ ಪಡೆದವರಿಂದ ಇದನ್ನು ನಿರೀಕ್ಷಿಸಬಹುದು ಮತ್ತು ಅವರು ಇದನ್ನು ಸಾಧ್ಯವಾಗಿಸುತ್ತಾರೆ ಎಂದರು.

ನಾವು ವಾಡುವ ಕೆಲಸದಲ್ಲಿ ಸರಿಯಾದ ಉದ್ದೇಶ ಇಟ್ಟುಕೊಂಡರೆ ಸರಿಂಾದ ಸಮಂುಕ್ಕೆ ಉತ್ತಮ ಸಾಧನೆ ವಾಡಬಹುದು. ಹಾಗಾಗಿ ನಾವು ವಾಡುವ ಕೆಲಸಗಳ ಹಿಂದೆ ಒಂದು ಸದುದ್ದೇಶ ಇರಬೇಕು ಎಂದು ತಿಳಿಸಿದರು.

ವಿದ್ಯಾರ್ಥಿ ದಿಸೆಯಲ್ಲಿ ಪಡೆಯುವ ಪದವಿಯನ್ನು ನೌಕರಿಗೆ ಮಾತ್ರ ಸೀಮಿತಗೊಳಿಸದೆ, ಸವಾಜದಲ್ಲಿ ಉತ್ತಮ ಪ್ರಜೆಗಳಾಗಿ ತಮ್ಮ ಕೈಲಾದ ಕೊಡುಗೆಂುನ್ನು ನೀಡಬೇಕು. ಪೋಷಕರು ತಮ್ಮ ಮಕ್ಕಳನ್ನು ಬೇರೆ ವಿದ್ಯಾರ್ಥಿಗಳೊಂದಿಗೆ ಹೋಲಿಕೆ ವಾಡಬಾರದು. ಇದು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಕುಗ್ಗಿಸುತ್ತದೆ, ಅಲ್ಲದೆ ಅತಿ ಹೆಚ್ಚು ಅಂಕ ಪಡೆಯುವಂತೆ ಒತ್ತಡ ಹೇರಬಾರದು ಎಂದು ಹೇಳಿದರು.

ವಿದ್ಯಾರ್ಥಿಗಳು ಪೋಷಕರಿಗೆ ಸುಳ್ಳು ಹೇಳುವುದು ಸಹಜ. ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳದೆ ಪಾಲಕರ ಜತೆ ಉತ್ತಮ ಸ್ನೇಹ - ಸಂಬಂಧವನ್ನು ಹೊಂದುವ ಮೂಲಕ ಉತ್ತಮ ಮಕ್ಕಳಾಗಿ ಬದುಕಿ ಎಂದು ಹೇಳಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಕಾಂರ್ುದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸಿಎಂಸಿ ಛೇರ‌್ಮನ್ ಟಿ.ನಾಗರಾಜು, ಪ್ರಾಂಶುಪಾಲ ಡಾ.ಎಸ್.ಮರೀಗೌಡ, ಕಾರ್ಯಕ್ರಮ ಸಂಯೋಜಕ ಪ್ರೊ. ಆರ್.ಅರವಿಂದ ಇದ್ದರು.