ಅಜ್ಜಂಪುರದ ಸಿರಗಲಿಪುರದಲ್ಲಿ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮವನ್ನು ಪುಷ್ಪಾ ಉದ್ಘಾಟಿಸಿದರು.  
ಜಿಲ್ಲೆ

ಮೌಢ್ಯದಿಂದ ಹೊರ ಬಂದಾಗ ಬಸವ ಸಮಾಜ ನಿರ್ಮಾಣ

ತರೀಕೆರೆ: ಮಹಿಳೆಯರು ಮೌಢ್ಯದಿಂದ ಹೊರ ಬಂದಾಗ ಮಾತ್ರ ಬಸವ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಜಾಗತಿಕ ಲಿಂಗಾಯತ ಮಹಾ ಸಭಾದ ಅಧ್ಯಕ್ಷೆ ಪುಷ್ಪಾ ಹೇಳಿದರು.
ಅಜ್ಜಂಪುರ ತಾಲೂಕಿನ ಸಿರಗಲಿಪುರದಲ್ಲಿ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಾಲು, ತುಪ್ಪ ಪೌಷ್ಠಿಕ ಆಹಾರವಾಗಿದ್ದು, ಇದನ್ನು ಮೌಢ್ಯದ ನೆಪದಲ್ಲಿ ಹುತ್ತ, ಕಲ್ಲು ನಾಗರಗಳಿಗೆ ಸಮರ್ಪಿಸುವ ಅಗತ್ಯವಿಲ್ಲ ಎಂದರು.
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಎಸ್.ಗಾಯತ್ರಮ್ಮ ಮಾತನಾಡಿ, ಸಂಪ್ರದಾಯವಾಗಿ ಆಚರಿಸಿಕೊಂಡು ಬರುತ್ತಿರುವ ಹಬ್ಬ ಹರಿದಿನಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದಾದರೆ, ಪ್ರಕೃತಿಗೆ ಹಾನಿಯೇ ಹೆಚ್ಚು ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾ ಸಭಾ ಜಿಲ್ಲಾ ಕಾರ್ಯದರ್ಶಿ ಮಧು, ಪ್ರಮುಖರಾದ ಷಡಾಕ್ಷರಿ, ಶಕುಂತಲಾ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜಪ್ಪ, ಜಾನಪದ ಕಲಾವಿದ ಸಿ.ಎಂ.ಶಂಕರಪ್ಪ, ಹೊಗರೇಹಳ್ಳಿ ಗಣೇಶಪ್ಪ ಮತ್ತಿತರರಿದ್ದರು.