ಡಾ.ಅಂಬೇಡ್ಕರ್​ ಕ್ರೀಡಾಂಗಣ ದಲ್ಲಿ ಸಾಧನಾ ಯೋಗ ಸಂಸ್ಥೆಯವರು ಯೋಗ ಗುಚ್ಛ ಪ್ರದರ್ಶನ ಮಾಡಿದರು. 
ಜಿಲ್ಲೆ

ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ : ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಗರಸಭೆ ಅದ್ಯಕ್ಷ ಎನ್​.ಗಣೇಶ್​ ತಿಳಿಸಿದರು.

ನಗರದ ಡಾ.ಬಿ.ಆರ್​.ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಸಾಧನಾ ಯೋಗ ಕೇಂದ್ರ ಸೇರಿ ವಿವಿಧ ಯೋಗ ಕೇಂದ್ರಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಯೋಗ ದಿನಾಚರಣೆಯಲ್ಲಿ ಮಾತನಾಡಿದರು.

ದೈಹಿಕ, ಮಾನಸಿಕ ಬಲಸಂರ್ವಧನೆಯಷ್ಟೆ ಅಲ್ಲ, ಇಡೀ ರಾಷ್ಟ$ವನ್ನು ಬಲಪಡಿಸುವ ಶಕ್ತಿ ಯೋಗಕ್ಕಿದೆ. ಆದ್ದರಿಂದ ಪ್ರತಿಯೊಬ್ಬರು ನಿತ್ಯ ಯೋಗಾಭ್ಯಾಸ ರೂಢಿಸಿಕೊಂಡಾಗ ದೈವದತ್ತವಾಗಿ ಸಿದ್ಧಿಯನ್ನು ಪಡೆದು ಸಂತೃಪ್ತಿ ಪಡೆಯಬಹುದಾಗಿದೆ ಎಂದರು. ಕನ್ನಮಂಗಲದ ಅಮ್ಮನಗುಡ್ಡ ನರಸಿಂಹಶಾಸ್ತಿ$ ಮಾತನಾಡಿ, ಆಧುನಿಕತೆ ಜೀವನಶೈಲಿ, ಆಹಾರ ಪದ್ಧತಿಗಳ ಅನುಸರಣೆಯಿಂದ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಯೋಗ ಸಂಜೀವಿನಿಯಾಗಲಿದೆ ಎಂದರು.

ಸಾಧನಾ ಯೋಗ ಕೇಂದ್ರ ಯೋಗಚಾರ್ಯ ವಾದಿರಾಜ ಮಾತನಾಡಿ, ಮನುಷ್ಯನಲ್ಲಿ ಸದ್ಭಾವನೆಗಳು ಬೆಳೆಸಿ ಸತ್ಕಾರ್ಯಗಳಿಗೆ ಪ್ರೇರೇಪಿಸುವ ಶಕ್ತಿ ಯೋಗಭ್ಯಾಸಕ್ಕಿದೆ. ಜೀವನ ಆಧುನಿಕತೆಯ ಯುಗದಲ್ಲಿ ಶಾಂತಿ ಹಾಗೂ ಒತ್ತಡ ರಹಿತ ಜೀವನನಡೆಸಲು ಯೋಗ ಸಹಕಾರಿಯಾಗಲಿದೆ ಎಂದರು.

ನಗರಸಭೆ ವ್ಯವಸ್ಥಾಪಕ ಮುಮ್ತಾಜ್​ ಪಾಷಾ, ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅದ್ಯೆ ಸುರೇಶ್​, ಕಾರ್ಯದರ್ಶಿ ಶೀಲಾ, ಯೋಗ ಶಿಕ್ಷಕ ರಂಗನಾಥ್​, ರೋಟರಿ ಅಧ್ಯಕ್ಷ ಮಾಜಿ ಅಧ್ಯಕ್ಷ ಸ್ಟುಡಿಯೋಮಂಜುನಾಥ್​, ಮುಖಂಡ ರವಿಕುಮಾರ್​, ದಿನೇಶ್​, ವಸಂತ್​, ಉಪಸ್ಥಿತರಿದ್ದರು.

ಯೋಗಗುಚ್ಚ ಪ್ರದರ್ಶನ : ಶನಿವಾರ ಬೆಳಗ್ಗೆ 5.30 ರಿಂದ 9.30ರವರೆಗೆ ನೂರಾರು ಮಂದಿ ಯೋಗಾಸಕ್ತರು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೊದಲಿಗೆ ಸರಳ ವ್ಯಾಯಾಮ ನಂತರ ಸೂರ್ಯನಮಸ್ಕಾರ, ಯೋಗಾಭ್ಯಾಸದ ಜತೆಗೆ ಸಾಧನ ಯೋಗ ಕೇಂದ್ರದ ವಿವಿಧ ಶಾಖೆಯ ಯೋಗಪಟುಗಳು ಯೋಗಗುಚ್ಛ ಪ್ರದರ್ಶನ ಮಾಡಿದರು. ಕೊನೆಯಲ್ಲಿ ಚಂದ್ರ ನಮಸ್ಕಾರ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.