ಎನ್.ಆರ್.ಪುರ: ದಾನಿಗಳಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತಿದೆ ಎಂದು ಪ್ರವಾಸಿ ಮಂದಿರ ರಸ್ತೆಯ ಸೆಂಟ್ ಜಾರ್ಜ್ ಜಾಕೋ ಬೈಟ್ ಚರ್ಚ್‌ನ ಾದರ್ ಎ.ಜೆ.ಜಾರ್ಜ್ ತಿಳಿಸಿದರು.
ಪ್ರವಾಸಿ ಮಂದಿರ ಸಮೀಪದ ಸೆಂಟ್ ಜಾರ್ಜ್ ಜಾಕೋ ಬೈಟ್ ಚರ್ಚ್‌ನಲ್ಲಿ ದಾನಿಗಳಾದ ಉದ್ಯಮಿ ಗದ್ದೇಮನೆ ವಿಶ್ವನಾಥ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿ, ನಾನು ದೀಪ್ತಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾಗ ಉದ್ಯಮಿ ವಿಶ್ವನಾಥ ವಿದ್ಯಾರ್ಥಿಯಾಗಿದ್ದರು. ಈಗ ದೊಡ್ಡ ಉದ್ಯಮಿಯಾಗಿ ಬೆಳವಣಿಗೆ ಹೊಂದಿರುವುದಕ್ಕೆ ನನಗೆ ಹೆಮ್ಮೆಯಾಗಿದೆ. ತಾವು ದುಡಿದ ಆದಾಯದಲ್ಲಿ ಸ್ವಲ್ಪ ಭಾಗವನ್ನು ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಗಳು, ದೇವಸ್ಥಾನ,ಚರ್ಚಗಳಿಗೆ ನೀಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ಮಾತನಾಡಿ, ಕಳೆದ 12 ವರ್ಷಗಳಿಂದ ಉದ್ಯಮಿ ಗದ್ದೇಮನೆ ವಿಶ್ವನಾಥ ಅವರು ಸಮಾಜ ಸೇವೆ ಮಾಡುತ್ತಿದ್ದು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ತೀರ್ಥಹಳ್ಳಿ ತಾಲೂಕಿನ 110 ಶಾಲೆಗಳ 7,500 ಮಕ್ಕಳಿಗೆ ಶಾಲಾ ಪರಿಕರ ನೀಡಿದ್ದಾರೆ. ದಾನ ಮಾಡಿ ಸಮಾಜದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ರಾಜ್ಯ ಕ್ರಿಶ್ಚಿಯನ್ ಕೌನ್ಸಿಲ್‌ನ ಮಾಜಿ ಸದಸ್ಯ ಎಂ.ಪಿ.ಸನ್ನಿ, ಸೆಂಟ್ ಜಾರ್ಜ್ ಜಾಕೋಬೈಟ್ ಚರ್ಚ್‌ನ ಕಾರ್ಯದರ್ಶಿ ೌಲೋಸ್, ಸಹ ಕಾರ್ಯದರ್ಶಿ ಎಲ್ದೋ, ಖಜಾಂಚಿಗಳಾದ ಟಿ.ವಿ.ವಿಜಯನ್, ಜೇಮ್ಸ್ ಹಾಗೂ ದಾನಿ ವಿಶ್ವನಾಥ ಅವರ ಪತ್ನಿ ಜಿನಿ ವಿಶ್ವನಾಥ್, ಎಂ.ಪಿ.ಮನು ಇದ್ದರು.