ವಿಜಯಪುರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸತಿಕ ಉತ್ಸವ ಕಾರ್ಯಕ್ರಮದಲ್ಲಿ ಅಂಬಿಕಾ ೂರ್ಪಡೆ ಮಾತನಾಡಿದರು. ಡಾ. ಎಸ್​.ಟಿ. ಮೇರವಾಡೆ ಇತರರಿದ್ದಾರೆ. 
ಜಿಲ್ಲೆ

ಜೇನುನೋಣದಂತೆ ಜೀವನ ಕಟ್ಟಿಕೊಳ್ಳಿ

ಗಿರೀಶ ಸಗರ

ವಿಜಯಪುರ: ಖ್ಯಾತ ಸಾಹಿತಿ ಡಾ. ಗುರುರಾಜ ಕರ್ಜಗಿಯವರ ಮಾತಿನಂತೆ ವಿದ್ಯಾರ್ಥಿಗಳು ಹುಲಿಯಾಗಿ ದರ್ಪದಿಂದ ಬಾಳುವುದಕ್ಕಿಂತ ಜೇನುಹುಳುವಿನ ಹಾಗೇ ಪ್ರತಿಯೊಬ್ಬ ಶಿಕ್ಷಕರಲ್ಲಿನ ಮಕರಂದ ಹೀರುವ ಮೂಲಕ ತಮ್ಮ ಜೀವನ ಕಟ್ಟಿಕೊಳ್ಳಬೇಕು ಎಂದು ಸಮಾಜ ಸೇವಕಿ ಅಂಬಿಕಾ ೂರ್ಪಡೆ ಹೇಳಿದರು.

ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಂಸತಿಕ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಬಿ.ವಿ. ಹಿರೇಮಠ ಮಾತನಾಡಿ, ನಮ್ಮ ದೇಶವು ಕಲೆ, ಸಾಹಿತ್ಯ, ವಿಜ್ಞಾನ, ಸಂಗೀತ ಕಲೆಗಳ ತವರೂರು ಎಂದು ತಿಳಿಸುವ ಜತೆಗೆ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಪಂಚಕೋಶಗಳ ಬಗ್ಗೆ ಮಾಹಿತಿ ನೀಡಿದರು.

ಉಪನ್ಯಾಸಕ ಜಿ.ಎಸ್​. ಬಗಲಿ ಮಾತನಾಡಿ, ಯಶಸ್ಸು ಎಂಬುದು ಕಠಿಣ ಪರಿಶ್ರಮದಿಂದ ಮಾತ್ರ ಸಾಧಿಸಬಹುದಾದ ಅಂಶ. ನಮ್ಮ ಮೇಲೆ ನಮಗೆ ನಂಬಿಕೆಯಿದ್ದರೆ ಜಗತ್ತನ್ನು ಗೆಲ್ಲಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್​.ಟಿ. ಮೇರವಾಡೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ನೀತಿ ಯಾವಾಗಲೂ ಒಳ್ಳೆಯ ರೀತಿಯಲ್ಲಿದ್ದರೆ ಆಗ ಪ್ರತಿಯೊಬ್ಬ ವಿದ್ಯಾರ್ಥಿಯು ಒಳ್ಳೆಯವರಾಗಿಯೇ ಬೆಳೆಯುತ್ತಾರೆ ಎಂದು ತಿಳಿಸಿದರು.

ರಾಧಾ ಬಿರಾದಾರ ಸ್ವಾಗತಿಸಿದರು. ಜ್ಯೋತಿ ಕದಂ ನಿರೂಪಿಸಿದರು. ಜ್ಯೋತಿ ಪೂಜಾರಿ ವಂದಿಸಿದರು.

ಉಪನ್ಯಾಸಕರಾದ ಬಿ.ಎ. ಕುಲಕರ್ಣಿ, ಎಸ್​.ಎಂ. ಚುಂಚೂರ, ಜಿ.ಎ. ಮೇಟಿ, ಗೌತಮಿ, ಆರ್​.ಎಸ್​. ಚಲವಾದಿ, ಸಿ.ಬಿ. ಹಿರೇಮಠ, ಮೇಘಾ ಹಿರೇಮಠ, ಜಿ.ಡಿ. ಹಿರೇಮಠ, ಪ್ರವಿಣ ಡೋಣೂರ, ಎಂ.ಟಿ. ಶೇಲಾರ ಮತ್ತಿತರರಿದ್ದರು.