ಜಿಲ್ಲೆ

ಗುಣಮಟ್ಟದ ಮನೆ ನಿರ್ಮಿಸಿಕೊಳ್ಳಿ

ಎಂ.ಎಸ್​.ಹಿರೇಮಠ ಬೆಳಗಾವಿ

ರಾಯಬಾಗ: ಫಲಾನುಭವಿಗಳು ಸರ್ಕಾರ ನೀಡುವ ಹಣದೊಂದಿಗೆ ತಮ್ಮ ಹಣ ಸೇರಿಸಿ ಗುಣಮಟ್ಟದ ಮನೆ ನಿರ್ಮಿಸಿಕೊಳ್ಳಬೇಕೆಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಯಂಡ್ರಾವ ಗ್ರಾಮದ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜೀವ ಗಾಂ ವಸತಿ ನಿಗಮದಿಂದ ಬಸವ ವಸತಿ ಗ್ರಾಮೀಣ (ಹೆಚ್ಚುವರಿ) ಯೋಜನೆಯಡಿ ಮಂಜೂರಾದ 29 ಮನೆಗಳ ಫಲಾನುಭವಿಗಳಿಗೆ ಮನೆ ನಿರ್ಮಾಣ ಕಾರ್ಯಾದೇಶ ಪತ್ರ ವಿತರಿಸಿ ಮಾತನಾಡಿ, ಸರ್ಕಾರದ ಸಹಾಯಧನದ ಸದುಪಯೋಗ ಪಡೆದುಕೊಂಡು ಶೌಚಾಲಯ ನಿರ್ಮಿಸಿ ಗ್ರಾಮವನ್ನು ಸ್ವಚ್ಛವಾಗಿರಿಸಿಕೊಳ್ಳಿ ಎಂದರು.

ಗ್ರಾಪಂ ಪಿಡಿಒ ಮಂಜುನಾಥ ಕಂಠಿಕಾರ, ಅಧ್ಯಕ್ಷೆ ಅಶ್ವಿನಿ ಧನಗರ, ಉಪಾಧ್ಯಕ್ಷೆ ಅಕ್ಕವ್ವ ಐಹೊಳೆ, ಕಲ್ಲಪ್ಪ ನಿಂಗನೂರೆ, ಸದಾಶಿವ ಘೋರ್ಪಡೆ, ವಿಶಾಲ ಪಡಲಾಳೆ, ಶೀಮಾ ಖೋತ, ಶಾಂತಾ ವಡ್ಡರ, ವಿನಾಯಕ ಕರಿಗಾರ ಇತರರಿದ್ದರು.