ಸಂಡೂರಿನಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರಿಗೆ ಅಖಿಲ ಕರ್ನಾಟಕ ಕುಳುವ ಮಹಾ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಕೆ.ರಮೇಶ, ಪ್ರಮುಖರಾದ ದೊಡ್ಡಮಾರೆಣ್ಣ, ರಾಮಾಂಜನಿ, ಕೆ.ಶೇಕಪ್ಪ, ಕೆ.ಈರಣ್ಣ, ಕೆ.ಪರುಶಪ್ಪ, ಕೆ.ಜಂಬಯ್ಯ, ಕೆ.ಹನುಮಂತ, ಬಸವರಾಜ ಇತರರಿದ್ದರು. 
ಜಿಲ್ಲೆ

ಕೊರಮ ಸಮುದಾಯಭವನ ನಿರ್ಮಿಸಿ

ಗಾಯತ್ರಿ ಮಾಲಿಪಾಟೀಲ್

ಸಂಡೂರು: ತಾಲೂಕಿನಲ್ಲಿ ಕೊರಮ, ಕೊರವ (ಕುಳುವ) ಸಮುದಾಯದವರು 35ಸಾವಿರ ಜನಸಂಖ್ಯೆ ಇದ್ದು, ಸ್ಥಳೀಯ ಟೌನ್‌ಹಾಲ್ ಬಳಿ ಸಮುದಾಯ ಭವನ ನಿರ್ಮಿಸುವಂತೆ ಅಖಿಲ ಕರ್ನಾಟಕ ಕುಳುವ ಮಹಾ ಸಂಘದಿಂದ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷ ಕೆ.ರಮೇಶ ಮಾತನಾಡಿ, ತಾಲೂಕಿನ ಕುಳುವ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದೆ. ಸಮುದಾಯದ ಅಭಿವೃದ್ಧಿಗಾಗಿ ಪಟ್ಟಣದ ಟೌನ್‌ಹಾಲ್ ಬಳಿ ಸರ್ವೇ ನಂ.104 ಮತ್ತು 101ರ 74ಸೆಂಟ್ಸ್ ಸರ್ಕಾರಿ ನಿವೇಶನ ನೀಡಿದರೆ ಅನುಕೂಲವಾಗುತ್ತದೆ ಎಂದರು. ಶಾಸಕಿ ಅನ್ನಪೂರ್ಣ ತುಕಾರಾಮ್ ಮಾತನಾಡಿ, ಸಮುದಾಯ ಭವನಕ್ಕೆ ಜಾಗ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.