ಸಿಂಧನೂರಿನ ಕುಷ್ಟಗಿ ರಸ್ತೆಯ ಸರ್ಕಾರಿ ಪದವಿ ಕಾಲೇಜಿಗೆ ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿ ನೂತನ ಕಟ್ಟಡದ ನೀಲಿನಕ್ಷೆ ವೀಕ್ಷಿಸಿದರು. ಉಪನ್ಯಾಸಕರಾದ ಡಾ.ಎಂ.ವೆಂಕಟ ನಾರಾಯಣ, ಬಸವರಾಜ ತಳಕಲ್, ವೈಜನಾಥ ಸಗರಮಠ, ಸಿಂಡಿಕೇಟ್ ಮಾಜಿ ಸದಸ್ಯ ಆರ್.ಸಿ.ಪಾಟೀಲ್ ಇದ್ದರು. 
ಜಿಲ್ಲೆ

ವಿವಿ ಮಾದರಿಯಲ್ಲಿ ಕಾಲೇಜು ನಿರ್ಮಿಸಿ

ಸಿಂಧನೂರು: ನಗರದ ಕುಷ್ಟಗಿ ರಸ್ತೆಯ ಸರ್ಕಾರಿ ಪದವಿ ಕಾಲೇಜಿನ ಉದ್ದೇಶಿತ ನೂತನ ಕಟ್ಟಡ ನಿರ್ಮಾಣದ ಸ್ಥಳಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ನೂತನ ಕಟ್ಟಡದ ನೀಲಿನಕ್ಷೆ, ಸ್ಥಳ ಹಾಗೂ ಕ್ರೀಡಾಂಗಣವನ್ನು ವೀಕ್ಷಿಸಿ, ಕಾಲೇಜು ಆವರಣ ದೊಡ್ಡದಾಗಿದ್ದು ಸಮರ್ಪಕವಾಗಿ ಬಳಸಿಕೊಂಡು ಸುಸಜ್ಜಿತ ಮತ್ತು ಆಧುನಿಕ ಶೈಲಿಯ ವಿವಿ ಮಾದರಿಯಲ್ಲಿ ಕಟ್ಟಡ ನಿರ್ಮಾಣ, ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ, ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಇಂಜಿನಿಯರ್ ಹಾಗೂ ಕಾಲೇಜಿನ ಸಿಬ್ಬಂದಿಗೆ ತಿಳಿಸಿದರು. ಉಪನ್ಯಾಸಕರಾದ ಡಾ.ಎಂ.ವೆಂಕಟ ನಾರಾಯಣ, ಬಸವರಾಜ ತಳಕಲ್, ವೈಜನಾಥ ಸಗರಮಠ, ಸಿಂಡಿಕೇಟ್ ಮಾಜಿ ಸದಸ್ಯ ಆರ್.ಸಿ.ಪಾಟೀಲ್ ಇತರರಿದ್ದರು.