ಜಿಲ್ಲೆ

ಎಮ್ಮೆ ಕಡಿದೆಸೆದ ಆರೋಪಿ ಬಂಧನ

ಬಸವರಾಜ ವೀರಪ್ಪ ಗರಗ

ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮದ ನೀರಗದ್ದೆಯಲ್ಲಿ ಎಮ್ಮೆ ಕಡಿದು ತಲೆ ಎಸೆದ ಪ್ರಕರಣದ ಎ-1 ಆರೋಪಿ ಅಬ್ದುಲ್ ಅಲಿ (ತಂದೆ ಮೊಹಮ್ಮದ ಸಾವುದ್ದಿನ್ ಜಬಾಲಿ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದ. ಶೋಧ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು, ಬೆಂಗಳೂರಿನ ಆರ್.ಟಿ. ನಗರದಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದು ಭಟ್ಕಳಕ್ಕೆ ಕರೆತಂದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಬಳಸಲಾದ ಎರಡು ಬೈಕ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಗೆ ಎಎಸ್​ಐ ರಾಜೇಶ್ ಹಾಗೂ ನಾರಾಯಣ, ಸಿಬ್ಬಂದಿಯಾದ ಶ್ರೀಪಾದ ಮತ್ತು ವಿನೋದ ಕುಮಾರರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.