ಜಿಲ್ಲೆ

ಕಾಡಾನೆ ದಾಳಿಗೆ ಬೂದಿಕೋಟೆ ವ್ಯಾಪ್ತಿಯಲ್ಲಿ ಅಪಾರ ಬೆಳೆ ನಾಶ

Kolar

ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿ ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಡಗಮಂದೆ, ಕೊತ್ತೂರು ಮತ್ತು ಗುಲ್ಲಹಳ್ಳಿಗೆ ಗುರುವಾರ ರಾತ್ರಿ 5ಕ್ಕೂ ಹೆಚ್ಚು ಕಾಡಾನೆಗಳು ನುಗ್ಗಿ ಸೌತೆಕಾಯಿ, ರಾಗಿ ಬೆಳೆ, ಆಲೂಗಡ್ಡೆ, ನೀರಿನ ಪೈಪ್ ಸೇರಿ ಹಲವು ಬೆಳೆ ನಾಶ ಮಾಡಿವೆ.

ಗೊಡಗಮಂದೆ ಗ್ರಾಮದ ರೈತ ನಾರಾಯಣಪ್ಪ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸೌತೆಕಾಯಿ ಬೆಳೆಯನ್ನು ಸಂಪೂರ್ಣ ನಾಶಮಾಡಿವೆ. ಕೊತ್ತೂರು ಗ್ರಾಮದ ರೈತ ತಿಪ್ಪಣ್ಣರ ರಾಗಿ ಬೆಳೆ, ಗೋವಿಂದಪ್ಪ ಅವರಿಗೆ ಸೇರಿದ ಆಲೂಗಡ್ಡೆ ಮತ್ತು ಡ್ರಿಪ್‌ಪೈಪ್ ನಾಶಮಾಡಿವೆ. ಗುಲ್ಲಹಳ್ಳಿ ರೈತ ಕೊಂಡಪ್ಪ ನಾಯಕ ಅವರ ಆಲೂಗಡ್ಡೆ ಮತ್ತು ಹುರುಳಿ ಬೆಳೆ ನಾಶ ಮಾಡಿವೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿನತ್ತ ಓಡಿಸಿದ್ದಾರೆ.