ಇಳಕಲ್ಲದ ವಿಜಯ ಮಹಾಂತೇಶ ದಾಸೋಹ ಭವನದಲ್ಲಿ ಆಯೋಜಿಸಿದ್ದ ಜಾನಪದ ಪರಿಷತ್‌ನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಕೋಡಿಹಾಳ ಗ್ರಾಮದ ಮಂಜುನಾಥ ಕೊಂಡೇಕಲ್ಲ ಮಾತನಾಡಿದರು. ಹಿರಿಯ ಲೇಖಕ ರಾಜಶೇಖರ ಕಲ್ಮಠ, ಡಾ.ಎಂ.ಬಿ. ಒಂಟಿ, ಶ್ರವಣಾ ಸಿಕ್ಕೇರಿಮಠ, ಭೀಮರಾವ್ ವಾಸ್ಟರ್ ಮತ್ತಿತರರಿದ್ದಾರೆ.  
ಜಿಲ್ಲೆ

ಬುಡುಬುಡಿಕೆಗಿದೆ ತನ್ನದೇ ಇತಿಹಾಸ

ವಿನಯ ಆಶೋಕ ನಾಯ್ಕ

ಇಳಕಲ್ಲ(ಗ್ರಾ): ಬುಡಬುಡಿಕೆ ಕಲೆ ನಿನ್ನೆ ಮೊನ್ನೆಯದಲ್ಲ, ಅದಕ್ಕೆ ತನ್ನದೇ ಇತಿಹಾಸವಿದೆ ಎಂದು ಕೋಡಿಹಾಳ ಗ್ರಾಮದ ಮಂಜುನಾಥ ಕೊಂಡೇಕಲ್ಲ ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ದಾಸೋಹ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಾನಪದ ಪರಿಷತ್‌ನ ದಶಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋಡಿಹಾಳ ಗ್ರಾಮದ ಸಾವಿರಾರು ಜನರು ಭವಿಷ್ಯ ಹೇಳುವ ಮೂಲಕ ಜನಪ್ರಿಯರಾಗಿದ್ದಾರೆ ಎಂದರು.

ಹಿರಿಯ ಲೇಖಕ ರಾಜಶೇಖರ ಕಲ್ಮಠ ಮಾತನಾಡಿ, ನೆಲದ ಮೂಲ ಸಂಸ್ಕೃತಿಯನ್ನು ಅನಾವರಣಗೊಳಿಸಿರುವ ಈ ತಾಣದಲ್ಲಿ ಜರುಗಿರುವ ಈ ಕಾರ್ಯಕ್ರಮ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಕಜಾಪ ತಾಲೂಕಾಧ್ಯಕ್ಷ ಚನ್ನಬಸಪ್ಪ ಲೆಕ್ಕಿಹಾಳ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಶ್ರವಣಾ ಸಿಕ್ಕೇರಿಮಠ ಬುಡಕಟ್ಟು ಜನಾಂಗದ ಸಂಸಕ್ಕತಿಯನ್ನು ಚಿತ್ರಗಳ ಮೂಲಕ ವಿವರಿಸಿದರು. ಡಾ.ಎಂ.ಬಿ. ಒಂಟಿ, ಸಾಹಿತಿ ಭೀಮರಾವ್ ವಾಸ್ಟರ್ ಮಾತನಾಡಿದರು.

ಮಹಾಂತೇಶ ಹೊಳಿ, ಗುರು ಗಾಣಿಗೇರ, ಬಸವರಾಜ ಬಾದವಾಡಗಿ, ವಿನೋದ ಬಾರಿಗಿಡದ, ಶಕುಂತಲಾ ಬೆಲ್ಲದ ಅವರನ್ನು ಸತ್ಕರಿಸಲಾಯಿತು.

ಶಿಲ್ಪಾ ಹಿರೇಮಠ, ಬಿ.ಬಿ. ಬಾದವಾಡಗಿ ಪ್ರಾರ್ಥಿಸಿದರು, ಎಚ್.ಬಿ. ಕಂಬಳಿ ಸ್ವಾಗತಿಸಿದರು, ಅಮರೇಶ ಐಹೊಳೆ ನಿರೂಪಿಸಿದರು ಹಾಗೂ ಮಹಾಂತೇಶ ಬಂಡಿ ವಂದಿಸಿದರು.