ಜಿಲ್ಲೆ

ಬೌದ್ಧ ಧರ್ಮ ಸೇಪಡೆ 14 ರಂದು

reportermys

ಮೈಸೂರು: ತಾಲೂಕಿನ ಬ್ಯಾತಹಳ್ಳಿ ಟಿವಿಎಸ್ ಕಾರ್ಖಾನೆ ಬಳಿಯ ಬುದ್ಧ ವಿಹಾರದಲ್ಲಿ ಅ.14 ರಂದು ಜಿಲ್ಲೆಯ ನೂರಾರು ಜನರು ಸಾಮೂಹಿಕವಾಗಿ ಬೌದ್ಧ ಧರ್ಮ ಸೇಪಡೆಗೊಳ್ಳುತ್ತಿದ್ದಾರೆ ಎಂದು ಮಹಿಷ ಮಂಡಲ ಅಂತಾರಾಷ್ಟ್ರೀಯ ಬುದ್ಧಿಸ್ಟ್ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಶಾಂತರಾಜು ತಿಳಿಸಿದರು.


ದೇಶ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದೆ. ಆದರೆ, ಹಿಂದು ಧರ್ಮದ ಪ್ರಾಚೀನ ದಿಗ್ಭಂದನಗಳು ಇಂದಿಗೂ ಸಮಾಜದಲ್ಲಿ ಚಾಲ್ತಿಯಲ್ಲಿವೆ. ಅಸ್ಪಶ್ಯತೆ ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧವಾದರೂ ನಿತ್ಯ ಈ ದೇಶದ ತಳಸಮುದಾಯಗಳು ಅಪಮಾನ ಕಿರುಕುಳ, ಚಿತ್ರಹಿಂಸೆ ಅನುಭವಿಸುತ್ತಲೇ ಇವೆ. ಹಿಂದು ಸಂಘಟನೆಗಳು ಈ ತಾರತಮ್ಯ, ದೌರ್ಜನ್ಯಗಳ ಬಗ್ಗೆ ಮೌನ ವಹಿಸಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.